Haridasa Sahitya — Vyasadasa
Baruvudella barali
ಬರುವುದೆಲ್ಲ ಬರಲಿ
Composer: Gopala Dasaru · Deity: Hari · Genre: Philosophy
Kannada lyrics
ಬರುವುದೆಲ್ಲ ಬರಲಿ ಸಿರಿಹರಿಯ ಕರುಣವಿರಲಿ ||ಪ|| ಗುರುಗಳ ಚರಣಸರೋರುಹ ಮಧುರಸ ತರತರ ತಪದಿ ಮೈಮರೆತಿರಲಿ ||ಅ.ಪ|| ಸತಿಯ ಮತಿಯು ಕೆಡಲಿ ಸುತರತಿಪತಿತರಾಗಿ ಬರಲಿ ಜೊತೆಯೊಳಿದ್ದ ಹಿತ ಪ್ರತಿಕೂಲನಾಗಲಿ ವತನ ಕೆಡುವ ಪ್ರಯತ್ನವು ಬರಲಿ || ಅರಸು ಕರೆಸದಿರಲಿ ಸತಿ ಸರಸಸುರಿಸದಿರಲಿ ನರಸಖನಿಗೆ ಭಾರ ಸಮರ್ಪಿಸಲಿ ವಿರಸಮಾಡಿ ಮನೆ ಮುರಿಸುತ ಬರಲಿ || ಮಾನಮಾಡದಿರಲಿ ಜನರಪಮಾನ ಮಾಡಿ ನಗಲಿ ಜಾನಹೀನ ನೆಂದೆನುತ ನಿಂದಿಸಲಿ ಶ್ರೀನಿಧಿ ಗೋಪಾಲವಿಠಲ ಬೆರಿಲಿ ||
Transliteration
Baruvudella barali sirihariya karunavirali || pa || Gurugala charana saroruha madhurasa tara tara tapadi maimaretirali || Satiya matiyu kedali | suta ratipatitanaagi barali | Joteyolidda hita pratikoolanaagali | Vatana keduva prayatnavu barali || 1 || Arasu karesadirali sathi sarasasurisadirali | Narasakhanige bhaara samarpisutali | Virasa maadi mane murisuta barali || 2 || Maana maadadirali janar…