Haridasa Sahitya — Vyasadasa

Baro namma manage raghavendra

ಬಾರೋ ನಮ್ಮ ಮನೆಗೆ ಶ್ರೀ

Composer: Madhwesha Vittala Dasaru · Deity: Raghavendra Teertharu · Genre: Bhakti

Kannada lyrics

ಬಾರೋ ನಮ್ಮ ಮನೆಗೆ ಶ್ರೀ ರಾಘವೇಂದ್ರ || ಪ || ಬಾರೋ ದುಃಖಾಪಹಾರ – ಬಾರೋ ದುರಿತದೂರ ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರು || ಅ || ಬಾಲಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ ಲೋಲ ಶ್ರೀ ನರಹರಿ ಕಾಲರೂಪವ ತೋರ್ದೆ || ೧ || ವ್ಯಾಸನಿರ್ಮಿತ ಗ್ರಂಥ – ಮಧ್ವಕೃತ ಭಾಷ್ಯವ ಬೇಸರದೆ ಓದಿ ಮೆರೆವ ವ್ಯಾಸಮುನಿಯೆ || ೨ || ಮಂತ್ರಗೃಹದಲಿ ನಿಂತ ಸುಯತಿವರ್ಯ ಅಂತ ತಿಳಿಯದೊ ನೀ ಅಂತರದೊಳು || ೩ || ಭೂತಪ್ರೇತಗಳನು ಘಾತಿಸಿ ಬಿಡುವಂಥ ಖ್ಯಾತಿಯುತ ಯತಿನಾಥನೆ ತುತಿಸುವೆ || ೪ || ಕುಷ್ಟರೋಗಾದಿಗಳು ನಷ್ಟ ಮಾಡುವಂಥ ಅಷ್ಟಮಹಿಮೆಯುತ ಶ್ರೇಷ್ಠಮುನಿಯೆ || ೫ || ಕರೆದರೆ ಬರುವಿಯೆಂಬೋ ಕೀರುತಿ ಕೇಳಿ ನಾ ಕರೆದೆನೊ ಕರುಣದಿ ಕರ ಪಿಡಿಯೋ || ೬…

Transliteration

Baro namma manege sriragavendra || Baru duhkapahara baro duritadura barayya sanmarga dari toruva guruve || Bala prahladanagi kula kasyapuvige lola srinarahariya kalarupava torde ||1 || Vyasanirmita grantha madhvakruta bashyava besarade Odi mereva vyasamuniye || 2 || Mantragruhadalininta suyativarya anta tiliyado ni antaradolu || 3 || Buta pretagalanu gatisi biduvantha kyatiyuta yatinathane tutisuv…