Haridasa Sahitya — Vyasadasa
Baro gururaja
ಬಾರೋ ಗುರುರಾಜ ಸುರಬುಜ
Composer: Shreekara Vittala Dasaru · Deity: Raghavendra Teertharu · Genre: Bhakti
Kannada lyrics
ಬಾರೋ ಗುರುರಾಜ ಸುರಭೋಜ ॥ ಪ ॥ ಸಂತತ ನಿನ್ನನು ಚಿಂತಿಪರಿಗೆ ಬಹು । ಚಿಂತೆ ಕಳೆವ ಪ್ರಭೋ ಮಂತ್ರ ಮಂದಿರದಿಂದ ॥ ೧ ॥ ಕರದಲ್ಲಿ ಬರುವ ಫನ್ನ ಬಿರುದು ಕೇಳಿದೆ ನಿನ್ನ । ಕರುಣಾಕರ ತವ ಚರಣವ ನಂಬಿದೆ ॥ ೨ ॥ ಶ್ರೀಕರವಿಠಲನೆ ತಾ ಖರೆ ಪರನೆಂದು । ಲೋಕದೊಳಗೆ ಸಾರಿದ ಹೇ ಕರುಣಾಕರ ॥ ೩ ॥
Transliteration
Baro gururaja surabuja || pa || Santata ninnanu chintiparige bahu | Chinte kaleva prabo mantra mandiradinda || 1 || Karedalli baruva Ganna birudu kelide ninna | Karunakara tava caranava nambide || 2 || Srikaraviththalane ta Kare paranendu | Lokadol sarida he karunakara || 3 ||