Haridasa Sahitya — Vyasadasa
Baro bega nirajaksha
ಬಾರೊ ಬೇಗ ನೀರಜಾಕ್ಷದೂರು
Composer: Vyasarajaru · Deity: Krishna / Govinda / Mukunda · Genre: Bhakti
Kannada lyrics
ಬಾರೊ ಬೇಗ ನೀರಜಾಕ್ಷದೂರು ಇದು ಯಾತಕೊ ||pa|| ಮೊಸರು ಮಾರುವ ಗೊಲ್ಲತಿಯರಅಸವಳಿಸಿ ಕೈಯ ಪಿಡಿದು ವಶನಾಗು ಎಂದು ಪೇಳಿನಸುನಗುತಲಿದ್ದೆಯಂತೆ ||1|| ಕುಸುಮಶರನ ಪೆತ್ತವನೆಬಸವನಾದೆ ಊರೊಳಗೆ ಶಶಿಮುಖೇರ ದೂರು ಬಹುಪಸರಿಸಿತು ಪೇಳಲಾರೆ||2|| ಕಂದಕೇಳು ಇಂದುಮುಖಿಯರಹೊಂದಿ ಆಡಲೇಕೆ | ಈಮಂದಿರದೊಳಾಡಿ ಸಲಹೊತಂದೆ ಉಡುಪಿ ಸಿರಿಕೃಷ್ಣ ||3||
Transliteration
Baro bega nirajaksha Duru idu etako ||pa|| Mosaru maruva gollatiyara Asavalisi ni kaiyapididu Vasavagu endu peli Nasunagutaliddeyante ||1|| Kusumasarana pettavane Basavanade urolage Sasimukiyara duru bahu Pasarisitu na pelalare ||2|| Kanda kelu indumukiyara Hondi ninadalyake Mandiradoladi salaho Tande udupi sirikrushna ||3||