Haridasa Sahitya — Vyasadasa

Baranyatake nire ni karatare

ಬಾರನ್ಯಾತಕೆ ನೀರೆ ನೀ ಕರೆತಾರೆ

Composer: Helavanakatte Giriyammanavaru · Deity: Shiva / Rudra Devaru · Genre: Bhakti

Kannada lyrics

ಬಾರನ್ಯಾತಕೆ ನೀರೆ ನೀ ಕರೆತಾರೆ ಸುಗುಣ ಗಂಭೀರನ ಕರೆತಾರೆ ||ಪ|| ಮೂರು ಲೋಕ ಸಂಚಾರ ಕರುಣಾಸಾಗರ ತೇಜಿಯನೇರಿ ಮೆರೆವನ ||ಅ.ಪ.|| ಕೋಮಲಾಂಗನ ಕಂತುದಹನನ ಸೋಮಾರ್ಕ ಶಿಖಿನೇತ್ರನ ವಾಮದೇವನ ವನಜಭವಸಂಭವ ಮುನಿಸ್ತೋಮ ವಿನುತ ಎನ್ನ ಪ್ರೇಮನ ||1|| ನೀಲಕಂಠನ ನಿಗಮಸಾರನ ಬಾಲಶಶಿಧರ ಭರ್ಗನ ಶೀಲಸದ್ಗುಣ ಫಾಲನೇತ್ರನ ಕಾಲಾಂತಕ ಎನ್ನ ಕಾಯ್ವನ ||2|| ಮಂಗಳಾತ್ಮನ ಮಲ್ಲರಿಪುದಲ್ಲಣ ದೇವೋತ್ತುಂಗ ಹೆಳವನಕಟ್ಟೆ ರಂಗಗತಿಸಖನಾದ ನೀಲಗಿರಿ ಲಿಂಗ ಮೂರುತಿಯ ||3||

Transliteration

Baranyatake nire ni karatare sugunagambirana ||pa|| Muru loka sancara karunasagara tejiyaneri merevana ||a.pa|| Komalangana kantudahananu somarka sikinetranu Vamadevanu vanajabava sambava munistomavinuta enna premana ||1|| Nilakanthana nigamasarana balasasidhara Bargana Silasadguna palanetrana kalantaka enna kayavana ||2|| Mangalatmana mallaripudallana devottunga helavanakatteya Rangagatisakanada…