Haridasa Sahitya — Vyasadasa
Bannisi gopi ta harasidalu-Enne acchuva haadu
ಬಣ್ಣಿಸಿ ಗೋಪಿ ಹರಸಿದಳು
Composer: Purandara Dasaru · Deity: Krishna · Genre: Dasara Pada
Kannada lyrics
ಬಣ್ಣಿಸಿ ಗೋಪಿ ಹರಸಿದಳು ಎಣ್ಣೆಯನೊತ್ತುತ ಯದುಕುಲ ತಿಲಕಗೆ ಆಯುಷ್ಯವಂತನಾಗು ಅತಿ ಬಲ್ಲಿದನಾಗು ಮಾಯದ ಖಳರ ಮರ್ದನನಾಗು ರಾಯರ ಪಾಲಿಸು ರಕ್ಕಸರ ಸೋಲಿಸು ವಾಯುಸುತಗೆ ನೀನೊಡೆಯನಾಗೆನುತ ಧೀರನು ನೀನಾಗು ದಯಾಂಬುಧಿಯಾಗು ಆ ರುಕ್ಮಿಣಿಗೆ ನೀನರಸನಾಗು ಮಾರನ ಪಿತನಾಗು ಮಧುಸೂದನನಾಗು ದ್ವಾರಾವತಿಗೆ ನೀ ಧೊರೆಯಾಗೆನುತ ಆನಂದ ನೀನಾಗು ಅಚ್ಯುತ ನೀನಾಗು ದಾನವಾಂತಕನಾಗು ದಯವಾಗು ಶ್ರೀನಿವಾಸನಾಗು ಶ್ರೀನಿಧಿ ನೀನಾಗು ಜ್ಞಾನಿ ಪುರಂದರವಿಠಲನಾಗೆನುತ
Transliteration
Bannisi gopi ta harasidalu ||pa|| Enneyanottuta yadukula tilakage || a.pa.|| Ayushyavantanagu ati ballidanagu | Mayavikalara mardananagu| Rayara palisu rakkasara solisu | Vayasutage ni odeyanagenutali ||1|| Dhiranu ninagu dayambudhiyagu | A rukminige ninarasanagu | Maranapitanagu madhusudananagu | Dvaravatige ni doreyagenutali ||2|| Ananda ninagu acyuta ninagu | Danavantakanagu dayavagu | Srinivas…