Haridasa Sahitya — Vyasadasa

Bandya vithala badavanalli

ಬಂದ್ಯಾ ವಿಠಲ ಬಡವನಲ್ಲಿ।

Composer: Gopala Dasaru · Deity: Vitthala · Genre: Bhakti

Kannada lyrics

ಬಂದ್ಯಾ ವಿಠಲ ಬಡವನಲ್ಲಿ। ವೃಂದಾವನದಲ್ಲಿ ಗೋವೃಂದಗಳ ಕಾಯ್ದವನೆ ॥ಪ॥ ಕೊರಳಲಿ ಸರಿಗೆ ಸರಪಳಿ ಪಚ್ಚೆ ಪದಕವು । ಪರಿಪರಿಯ ಹಾರ ಶ್ರೀ ತುಳಸಿ ಮಾಲೆ ॥ ಸಿರಿಗಂಧ ಲೇಪ ಶ್ರೀವತ್ಸ ಉರ ಕಿರುಡೊಳ್ಳು । ವರಕಟಿಗೆ ಗಂಟೆ ಪರಿಪರಿಯ ಡಾಬವ ಸುತ್ತಿ ॥1॥ ಸುಳಿಗುರುಳು ಮೇಲೆ ಅರಳೆಲೆಯು ಕಿರೀಟ । ಎಳೆದಳಿರು ಚೂತ ಮಲ್ಲಿಗೆಯು ದೂರ್ವೆ ॥ ಥಳಥಳಿಪ ಮುಖ ನಾಸ ನಯನ ಫಣೆಯಲಿ ತಿಲಕ । ಚಲಿಸುವ ಕರ್ಣಕುಂಡಲ ಪ್ರಭೆಯು ಶೋಭಿಸುತ್ತ ॥2॥ ಮುಂಗೈಯ ಕಡಗ ಸರಪಳಿ ತೋಳ ಭಾಪುರಿ । ಶೃಂಗಾರವಾದ ಗದೆ ಶಂಖ ಚಕ್ರ ॥ ಅಂಗೈಯ ಪದುಮ ಅಂಗುಲಿ ವೇಣು ಮೀಟುತ । ಹಿಂಗದೆ ಎನ್ನ ಅಂತರಂಗದ ಮನೆಗಿಂದು ॥3॥ ಈಸು ಬಗೆ ಪೂಜೆಯು ಎನ್ನಿಂದಲಾಗದು । ಲೇಶವಾದರು ಇಲ್ಲ ಎನಗೆ ಜ…

Transliteration

Bandya vithala badavanalli| Vrundavanadalli govrundagala kaydavane ||pa|| Koralali sarige sarapali pacce padakavu | Paripariya hara sri tulasi male || Sirigandha lepa srivatsa ura kirudollu | Varakatige gante paripariya dabava sutti ||1|| Suligurulu mele araleleyu kirita | Eledaliru cuta malligeyu durve || Thalathalipa muka nasa nayana paneyali tilaka | Calisuva karnakundala prabeyu sobisutta ||2|…