Haridasa Sahitya — Vyasadasa
Bandu nindiha nodi
ಬಂದು ನಿಂತಿಹ ನೋಡಿ
Composer: Purandara Dasaru · Deity: Srinivasa / Venkatesha · Genre: Bhakti
Kannada lyrics
ಬಂದು ನಿಂತಿಹ ನೋಡಿ ಭೂತಳದಿ ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ ನಿರಂತರ ಪೊಂದಿ ಭಜನೆಯ ಮಾಡಿ ಆನಂದಗೂಡಿ ವಂದಿಸುತ ಮನದೊಳಗೆ ಇವನಡಿ ದ್ವಂದ್ವ ಭಜಿಸಲು ಬಂದ ಭಯಹರ ಇಂದುಧರ ಸುರವೃಂದನುತ ಗೋ- ವಿಂದ ಘನ ದಯಾಸಿಂಧು ಶ್ರೀಹರಿ ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ- ಗಾರ ನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ ವಾರವಾರಕೆ ಪೂಜೆಗೊಂಬುವ ಹಾರ ಮುಕುಟಾಭರಣ ಕುಂಡಲಧಾರ ಭುಜ ಕೇ- ಯೂರಭೂಷಿತ ಮಾರಪಿತ ಗುಣ ಮೋಹನಾಂಗ ಚಾರು ಪೀತಾಂಬರ ಕಟಿ ಕರವೀರ ಕ- ಲ್ಹಾರಾದಿ ಪೂವಿನ ಹಾರ ಕೊರಳೊಳು ಎಸೆವು- ತಿರೆ ವದನಾರವಿಂದನು ನಗುತ ನಲಿಯುತ ಎಲ್ಲ ಭುಕುತರಭೀಷ್ಟ ಕೊಡುವುದಕೆ ತಾ…
Transliteration
Bandu nindiha nodi bhutaladi venkata indireya oda kudi oppuva nirantara pondi bhajaneya madi Ananda kudi Vandisuta manadolage ivanadi dvandava bhajisalu banda bhayahara indudhara sura vrndanuta govinda ghana daya sindhu shri hari Dvaradeda baladalli jaya vijayaribbaru seri seviparalli sanakadinuta shrngaradi angadalli muttinali shobhipa hara pondihudalli vistaradalli vara varake puje kombuva hara…