Haridasa Sahitya — Vyasadasa
Bandu nillo kanna munde
ಬಂದು ನಿಲ್ಲೋ ಕಣ್ಣ ಮುಂದೆ
Composer: Vijaya Dasaru · Deity: Hari · Genre: Bhakti
Kannada lyrics
ಬಂದು ನಿಲ್ಲೋ ಕಣ್ಣ ಮುಂದೆ ।।ಪ।। ಬಂದು ನಿಲ್ಲೋ ನನ್ನ ಪಾದಕ್ಕೆ ವಂದಿಪೆ ಇಂದಿರೆಯರಸ ಗೋವಿಂದ ಮುಕುಂದ ನೀ ।।ಅ.ಪ।। ಅರಳಿದ ಕೆಂದಾವರೆಯ ಧಿಕ್ಕರಿಸುವ ಚರಣಾರವಿಂದವ ನಿರುತ ತೋರು ನೀನು ।।೧।। ನೀಲಾಲಕ ಭ್ರಮರಕುಂತಲಮಂಡಿತ ಮೇಲಾದ ರಾಕೇಂದು ಮುಖವ ತೋರಿಸುತಲಿ ।।೨।। ಪದುಮನೇತ್ರನೆ ನಿನ್ನ ಸದನವೆನುತ ಎನ್ನ ಹೃದಯದೊಳಗೆ ನಿಂತು ನಾ ಮುದದಿ ಭಜಿಸುವಂತೆ ।।೩।। ಕರಿಯ ಮೊರೆಯ ಕೇಳಿ ಕರುಣದಿಂ ಬಂದಂತೆ ಕರೆದಾಗ ನಿನ್ನ ದಿವ್ಯಚರಣವ ತೋರಿಸುತ ।।೪।। ಅಜಭವಾದಿಗಳಿಗೆ ನಿಜಪದವನಿತ್ತಂತೆ ಭಜಿಪ ಭಕ್ತರಿಗೊಲಿವ ವಿಜಯವಿಠಲರೇಯ ।।೫।।
Transliteration
Bandu nillo kanna munde ||pa|| Bandu nillo nanna padakke vandipe Indireyarasa govinda mukunda ni ||a.pa|| Aralida kendavareya dhikkarisuva Charanaravindava niruta toru ninu ||1|| Nilalaka bramarakuntalamandita Melada rakendu mukava torisutali ||2|| Padumanetrane ninna sadanavenuta enna Hrudayadolage nintu na mudadi Bajisuvante ||3|| Kariya moreya keli karunadim bandante Karedaga ninna divyacharana…