Haridasa Sahitya — Vyasadasa
Bandevaya govinda setti
ಬಂದೆವಯ್ಯ ಗೋವಿಂದಶೆಟ್ಟಿ –
Composer: Kanakadasaru · Deity: Srinivasa / Venkatesha · Genre: Bhakti
Kannada lyrics
ಬಂದೆವಯ್ಯ ಗೋವಿಂದಶೆಟ್ಟಿ – ನಿಮ್ಮಹರಿವಾಣ ತೀರ್ಥಪ್ರಸಾದ ಉಂಟೆನಲಾಗಿ ||pa|| ಅಪ್ಪವು ಅತಿರಸ ತುಪ್ಪವು ಚಿನಿಪಾಲುಒಪ್ಪುವ ಸಕ್ಕರೆ ಯಾಲಕ್ಕಿಯು ಅಪರೂಪವಾದ ಕಜ್ಜಾಯಗಳನೆಲ್ಲಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ||1|| ಒಡೆದ ಮಡಕೆ ತಂದು ಇಡಿದು ನಾಮವ ಮಾಡಿಕೊಡುವೆ ನೀ ಕಾಸಿಗೆ ಒಂದೊಂದನು ಒಡಲು ತುಂಬಿ ಮಿಕ್ಕ ಅನ್ನವ ಮಾರಿಸಿಒಡವೆಯ ಗಳಿಸುವ ಕಡುಲೋಭಿ ಶೆಟ್ಟಿ ||2|| ಶೇಷಗಿರಿಯಲ್ಲಿ ವಾಸ ಮಾಡಿಕೊಂಡುದೇಶದೇಶಕ್ಕೆ ಹೆಸರಾದ ಶೆಟ್ಟಿ ಕಾಸುಕಾಸಿಗೆ ಬಡ್ಡಿ ಗಳಿಸಿಕೊಂಬ ಆದಿಕೇಶವ ನಾರಾಯಣ ತಿಮ್ಮಶೆಟ್ಟಿ||3||
Transliteration
Bandevaya govinda setti, Nimma harivana tirtha prasada untenalagi|| Appavu athirasa tuppa cinni palu, Oppuva sakkare Alakkiyu, Aparupavada kajjaya rasigala, Soppanna desakke maruva setti||1|| Odeda madakeyalli aredu namava madi, Koduveni kasige ondondanu. Odalu tumbimikka ogara marisi, Odeveya galisuva kadu lobi setti||2|| Sesagiriyalli vasa madi kondu, Desakke prasada nadesuva setti, Ase madi han…