Haridasa Sahitya — Vyasadasa
Bandanu raghavendra
ಬಂದಾನು ರಾಘವೇಂದ್ರ
Composer: Madhwesha Vittala Dasaru · Deity: Raghavendra Teertharu · Genre: Bhakti
Kannada lyrics
ಬಂದಾನು ರಾಘವೇಂದ್ರ ಇಂದಿಲ್ಲಿಗೆ || ಪ || ಕಂದನ ಮೊರೆ ಕೇಳಿ ಜನನಿಯು ಬರುವಂತೆ || ಅ || ಗಜವೇರಿ ಬಂದಾ – ಜಗದಿ ತಾ ನಿಂದಾ ಅಜಪಿತ ರಾಮನ ಪದಾಬ್ಜ ಸ್ಮರಿಸುತಲಿ || ೧ || ಹರಿಯ ಕುಣಿಸುತ ಬಂದ – ನರಹರಿ ಪ್ರಿಯ ಬಂದಾ ಶರಣಾಗತರನು ಕರವಪಿಡಿವೆನೆಂದು || ೨ || ಪ್ರಲ್ಹಾದ ವ್ಯಾಸಮುನೀಂದ್ರ – ರಾಘವೇಂದ್ರ ನಿಲಿಸುತ ಮನವ ಮಧ್ವೇಶವಿಠ್ಠಲನಲ್ಲಿ || ೩ ||
Transliteration
Bandanu raghavendra indillige || pa || Kandana more keli jananiyu baruvante || a || Gajaveri banda – jagadi ta ninda Ajapita ramana padabja smarisutali || 1 || Hariya kunisuta banda – narahari priya banda Saranagataranu karavapidivenendu || 2 || Pralhada vyasamunindra – raghavendra Nilisuta manava madhvesaviththalanalli || 3 ||