Haridasa Sahitya — Vyasadasa
Bandano govinda
ಬಂದನೋ ಗೋವಿಂದ ಚನ್ದದಿ ಅನನ್ದ
Composer: Vyasa Tatvagna Teertharu · Deity: Krishna / Govinda / Mukunda · Genre: Bhakti
Kannada lyrics
ಬಂದನೋ ಗೋವಿಂದ ಚಂದದಿ ಆನಂದ ಸುಂದರಿಯ ಮಂದಿರಕ್ಕೆ ನಂದನಕಂದಾ (ಆನಂದ)ನಂದನಕಂದಾ || PA || ಸುಂದರಕಾರ ನಂದ ಕಂದ ಗಂಭೀರಾ ಇಂದು ವದನೆಯರ ಮುಖಗಳಿಂದ ನೋಡಿದ || ಗಂಧ ಕುಸುಮ ಕರದಿಂದ ಮೂಡಿಸಿದ ಬಂದನೋ ಗೋವಿಂದನೋ ಅರವಿಂದ ನಯನ || 1 || ಕಾನನಾದಲ್ಲಿ ಬಲು ದೀನನಾಗಲಿ ವೇಣುನಾದವೋ ತಾ ಕೂಡಿ ಮೊದವೂ || ಜಾಣನಿವನು ಸುಮ ಬಾಣ ಪಿತನು ಮಾನಿನೀ ಮನೆಗಳಲ್ಲಿ ಗಾನ ಮಾಡುತಾ || 2 || ಓಡಿ ಬಂದರೋ ಬಲು ಬೇಡಿಕೊಂಡರೋ ಗಾರುಡಿಕಾರನು ಅವರ ನೋಡಿ ಮೆರೆದರೋ || ಮಾಡಿದ ಜಾಲ ವಾಸುದೇವ ವಿಠಲ ಮಾಡಿದ ಮನ ಮಾಡಿದ ತಾ ಕೂಡಿದ ನಾಗ || 3 ||
Transliteration
Bandano govinda chandadi Ananda sundariya mandirakke nandanakanda nandanakandall sundarakara nanda kanda ganbeera indu vadaneyara mukagalinda nodida tanda kusuma karadinda mudisida bandano govindano aravinda nayana ll1|| kananadalli baludeenanagali venunadavo tanudi modalu jananivanu suma bana pitanu manini mana galoliyuva gana maduttalli ||2|| odi bandaro balu bedikondaro garudikaranu avara nodi…