Haridasa Sahitya — Vyasadasa
Bandanene ranga bandanene
ಬಂದನೇನೆ ರಂಗ ಬಂದನೇನೆ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಬಂದನೇನೆ ರಂಗ ಬಂದನೇನೆ ।।ಪ।। ಎನ್ನ ತಂದೆ ಬಾಲಕೃಷ್ಣ ನವನೀತಚೋರ ।।ಅ.ಪ।। ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆ ಹೊಳೆಹೊಳೆಯುವ ಪಾದವನೂರುತ ನಲಿನಲಿದಾಡುವ ಉಂಗುರ ಅರಳೆಲೆ ಥಳಥಳಥಳ ಹೊಳೆಯುತ ಶ್ರೀಕೃಷ್ಣ ।।೧।। ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆ ಝಣಝಣಝಣರೆಂಬ ನಡುವಿನ ಗಂಟೆ ಧಣಧಣಧಣರೆಂಬ ಪಾದದ ತೊಡವಿನ ಮಿಣಿಮಿಣಿ ಕುಣಿದಾಡುತ ಶ್ರೀಕೃಷ್ಣ ।।೨।। ಹಿಡಿಹಿಡಿ ಹಿಡಿಯೆಂದು ಪುರಂದರವಿಠಲನ ದುಡುದುಡುದುಡು ದುಡನೇ ಓಡುತ ನಡೆನಡೆ ನಡೆಯೆಂದು ಮೆಲ್ಲನೆ ಪಿಡಿಯಲು ಬಿಡಿಬಿಡಿಬಿಡಿ ದಮ್ಮಯ್ಯ ಎನ್ನುತ ।।೩।।
Transliteration
Bandanene ranga bandanene ||pa|| Enna tande balakrushna navanitacora ||a.pa|| Gilugilugiluremba ponnanduge gejje Holeholeyuva padavanuruta Nalinalidaduva ungura aralele Thalathalathala holeyuta srikrushna ||1|| Kinikinikiniremba karada kankana bale Janajanajanaremba naduvina gante Dhanadhanadhanaremba padada todavina Minimini kunidaduta srikrushna ||2|| Hidihidi hidiyendu purandaravithalana Dududu…