Haridasa Sahitya — Vyasadasa
Bandal node mandiradolu
ಬಂದಳ್ ನೋಡೆ ಮಂದಿರದೊಳು ಭಾಗ್ಯದಾ ಲಕ್ಷ್ಮೀ
Composer: Jagannatha Dasaru · Deity: Lakshmi Devi · Genre: Bhakti
Kannada lyrics
ಬಂದಳ್ ನೋಡೆ ಮಂದಿರದೊಳು ಭಾಗ್ಯದಾ ಲಕ್ಷ್ಮೀ | ಭಾಗ್ಯದ ಲಕ್ಷ್ಮಿ ಬಂದಾಳು ನೋಡೆ || ಪ || ಅಂದುಗೆ ಕಿರು ಗೆಜ್ಜೆ ಘಿಲ್ ಘಿಲ್ಲೆನುತ ||| ಅ ಪ || ಘಿಲ್ ಘಿಲ್ ಘಿಲ್ ಘಿಲ್ ಘಿಲ್ಲೆನುತಾ ಮುದ್ದು ಪಾದದಿ ಹೆಜ್ಜೆಯನಿಕ್ಕುತಾ || 1 || ಎಡ ಬಲದಲ್ಲಿ ಗಜಗಳಿಂದ ಪೂಜೆಗೊಳ್ಳುತ ಬಿಡದೆ ತನ್ನ ಕರ ಕಮಲದಿ ಅಭಯ ಕೊಡುತಲಿ || 2 || ಅತಿ ಹರುಷದಿ ಹಿತದಿ ತನ್ನ ಪತಿಯ ಸಹಿತಾಗಿ ವಾರಿನೋಟದಿಂದ ಭಕ್ತರಿಗೆ ವರವ ಕೊಡುತಲಿ || 3 || ಸೃಷ್ಟಿಗೊಡೆಯ ತಂದೆ ಜಗನ್ನಾಥವಿಠ್ಠಲನ ಪಟ್ಟದರಸಿ ಅರ್ಥಿಯಿಂದಲಿ ಭಕ್ತರ ಮನೆಗೆ || 4 ||
Transliteration
Bandal node mandiradolu bhaagyadaa lakshmi | Bhaagyada lakshmi bandaalu node || pa || Anduge kiru gejje ghil ghillenuta |A.Pa|| Ghil ghil ghil ghil ghillenutaa Muddu paadadi hejjeyanikkutaa || 1 || Eda baladalli gajagalinda poojegolluta | Bidade tanna kara kamaladi abhaya kodutali || 2 || Ati harushadi hitadi tanna patiya sahitaagi | Vaarinotadinda bhaktarige varava kodutali || 3 || Srushtigodeya…