Haridasa Sahitya — Vyasadasa

Bandaddella barali govindana

ಬಂದದ್ದೆಲ್ಲ ಬರಲಿ ಗೋವಿಂದನ

Composer: Purandara Dasaru · Deity: Hari · Genre: Bhakti

Kannada lyrics

ಬಂದದ್ದೆಲ್ಲ ಬರಲಿ ಗೋವಿಂದನ ದಯ ನಮಗಿರಲಿ||pa|| ಇಂದಿರೆ ರಮಣನ ಧ್ಯಾನವ ಮಾಡಲು ಬಂದ ದುರಿತ ಬಯಲಾದುದಿಲ್ಲವೆ||a.pa|| ಅರಗಿನ ಮನೆಯೊಳಗಂದು ಪಾಂಡವರನು ಕೊಲಬೇಕೆಂದು ದುರುಳ ಕೌರವ ಬಂದು ಅತಿ ಹರುಷದಲಿರುತಿರಲಂದು ಹರಿ ಕೃಪೆ ಅವರಲ್ಲಿದ್ದ ಕಾರಣ ಬಂದ ಘೋರ ದುರಿತ ಬಯಲಾದುದಿಲ್ಲವೆ?||1|| ಆರು ಒಲಿಯದಿರಲೆನ್ನ ಮುರಾರಿ ಎನಗೆ ಪ್ರಸನ್ನ ಹೋರುವ ದುರಿತದ ಬನ್ನ ನಿವಾರಿಪ ಕರುಣ ಸಂಪನ್ನ ಶ್ರೀರಮಣನ ಸಿರಿ ಚರಣ ಶರಣರಿಗೆ ಕ್ರೂರ ಯಮನು ಶರಣಾಗಲಿಲ್ಲವೆ?||2|| ಸಿಂಗನ ಪೆಗಲೇರಿದವಗೆ ಕರಿ ಭಂಗವೇಕೆ ಮತ್ತವಗೆ ರಂಗನ ಕೃಪೆಯುಳ್ಳವಗೆ ಭವ ಭಂಗಗಳೇತಕ್ಕವಗೆ ಮಂಗಳ ಮಹಿಮ ಪುರಂದರವಿಠಲ ಶು- ಭಾಂಗನ ದಯವೊಂದಿದ್ದರೆ ಸಾಲದೆ||3|| Bandaddell…

Transliteration

Indire ramanana dhyanava madalu Banda durita bayaladudillave||a.pa|| Aragina maneyolagandu pandavaranu kolabekendu Durula kaurava bandu ati harushadalirutiralandu Hari krupe avarallidda karana banda Gora durita bayaladudillave?||1|| Aru oliyadiralenna murari enage prasanna Horuva duritada banna nivaripa karuna sampanna Sriramanana siri carana saranarige Krura yamanu saranagalillave?||2|| Singana p…