Haridasa Sahitya — Vyasadasa
Banda nindu kanna munde
ಬನ್ದ ನಿಂದು ಕನ್ನಮುನ್ದೇ ರಗವೇನ್ದ್ರನು |
Composer: Seetarama Vittala Dasaru · Deity: Raghavendra Teertharu · Genre: Bhakti
Kannada lyrics
ಬಂದನಿಂದು ಕಣ್ಣಮುಂದೆ ರಾಘವೇಂದ್ರನು ತಂದು ಶುಭವ ಭೂರಿ ಸುಖವ ಸುಮ್ಮುನೀಂದ್ರನು || PA || ಶೀಲಮೂರ್ತಿ ನಾರಸಿಂಹ ದೇವನೆದುರಲಿ ಬಾಲನಾಗಿ ನಿಂದು ರೂಪ ನೋಡಿ ಮೆರೆದನು || 1 || ಲೋಲಕೃಷ್ಣ ಮುಂದೆ ಕುಣಿಯೆ ಸಾಲಿಗ್ರಾಮವ ತಾಳಮಾಡಿ ನೋಡಿ ನಲಿದ ಯತಿಯು ಬಂದನು || 2 || ಎರಡು ರಾಜ್ಯವಾಳಿ ಮೆರೆದ ರಾಯ ಬಂದನು ಎರಡು ವೃಂದಾವನದಿ ಇರುವ ಸ್ವಾಮಿ ಬಂದನು || 3 || ತಂಪತೋರಿ ಕಂಪಬೀರಿ ಮನವನರಳಿಸಿ ಸಂಪದವನಿತ್ತು ಹರಸಿ ಕಾಯಬಂದನು || 4 || ದಾತ ಸೀತಾರಾಮ ವಿಠಲನ ಭಜಕನು ಪ್ರೀತನಾಗಿ ಬಂದು ನಿಂದ ರಾಘವೇಂದ್ರನು || 5 ||
Transliteration
Banda nindu kannamunde ragavendranu | Tandu subava buri sukava sanmunindrana || pa || Silamurti narasimhadevanedurali | Balanagi nindu rupa tori meredanu || 1 || Lola krushna mumde kuniye saligramava | Tala madi nodi nalida yatiyu bamdanu || 2 || Eradu rajyavali mereda raya bandanu | Eradu vrumdavanadi iruva svami bandanu || 3 || Tampa tori kampa biri manavanaralisi | Sampadavanittu harasi kaya ba…