Haridasa Sahitya — Vyasadasa

Banda duritgala kaleyo

ಬಂದ ದುರಿತಗಳ ಕಳೆಯೊ

Composer: Madhwesha Vittala Dasaru · Deity: Raghavendra Teertharu · Genre: Bhakti

Kannada lyrics

ಬಂದ ದುರಿತಗಳ ಕಳೆಯೊ – ತಂದೆ ಗುರುರಾಯ ಕಂದನ ಭವಣೆಯ ಇಂದು ನೋಡದಿರಯ್ಯ || ಪ || ನಿನ್ನ ಹೃದಯವಾಸಿ ನರಹರಿಯ ನಾಮವನು ಅನುದಿನವು ಬಿಡದೆ ಭಜಿಸುತಿರಲು ಇನಕಂಡ ಹಿಮದಂತೆ ತನುಬಾಧೆ ಓಡುವುದು ಅನುಭವಕೆ ತಂದುಕೊಡುವ ಮುನಿಶಿಖಾಮಣಿಯೆ || ೧ || ನಿನ್ನ ಬಾಧೆಯು ಶ್ರೀ ನರಹರಿಯು ಸಹಿಸದೆಲೆ ಸನ್ನುತದಿ ಬಂದಂತೆ ಸುಧೀಂದ್ರ ಕರಜ ಖಿನ್ನನಾಗಿಪ್ಪೆನ್ನ ಚೆನ್ನಾಗಿ ಸಲಹಯ್ಯ ಅನ್ಯನೆನಿಸದೆಲೆ ಶ್ರೀಮೋದಾರ್ಯಮತಚಂದ್ರ || ೨ || ಪ್ರಲ್ಹಾದನೆಂದೆನಿಸಿ ತಂದೆ ಶಾಪವ ಕಳೆದ ಒಳ್ಳೆ ಶಾಸ್ತ್ರವ ಪೇಳಿ ಓಡಿಸಿದೆ ಮಾಯಿಗಳ ಬಲ್ಲಿದ ಮಧ್ವೇಶವಿಠ್ಠಲನ ಕೀರುತಿಯ ಮೇಲಾಗಿ ಪೊಗಳುವ ಮಂತ್ರಾಲಯವಾಸಿ || ೩ ||

Transliteration

Banda duritagala kaleyo – tande gururaya Kandana bavaneya indu nodadirayya || pa || Ninna hrudayavasi narahariya namavanu Anudinavu bidade Bajisutiralu Inakanda himadante tanubadhe oduvudu Anubavake tandukoduva munisikamaniye || 1 || Ninna badheyu sri narahariyu sahisadele Sannutadi bandante sudhindra karaja Kinnanagippenna chennagi salahayya Anyanenisadele srimodaryamatachandra || 2 || Pralhadane…