Haridasa Sahitya — Vyasadasa

Balire balire narasimha

ಭಳಿರೆ ಭಳಿರೆ ನರಸಿಂಹ

Composer: Vijaya Dasaru · Deity: Narasimha · Genre: Bhakti

Kannada lyrics

ಭಳಿರೆ ಭಳಿರೆ ನರಸಿಂಹ ಮಹಾಸಿಂಹ | ಮಲಮಲಾ ಮಲತವರ ವೈರಿ ಉರಿಮಾರಿ||pa|| ನಗನಗಾ ನಗನಗಗಳಲ್ಲಾಡೆ ಚತುರ್ದಶ | ಜಗಜಗ ಜಗವೆಲ್ಲ ಕಂಪಿಸಿ ಕಂಬನಾಗೆ || ಹಗೆ ಹಗೆ ಹಗೆ ಹಗೆ ಬಲವ ದೆಶೆಗೆಡಿಸಿ ರೋಷಗಿಡಿ | ಉಗು ಉಗು ಉಗುಳುತ್ತ ಬಂದ ನರಸಿಂಹ ||1|| ಬಿಗಿ ಬಿಗಿ ಬಿಗಿದು ಹುಬ್ಬುಗಂಟನೆ ಹಾಕಿ | ಹೊಗೆ ಹೊಗೆ ಹೊಗೆ ಸುತ್ತಿ ಸರ್ವರಂಜೆ || ನೆಗ ನೆಗ ನೆಗ ನೆಗದು ಕುಪ್ಪಳಿಸಿ ಅಸುರನ್ನ | ಮಗು ಮಗು ಮಗು ಮಗು ಬೇಡಿಕೊಂಡ ನರಸಿಂಹಾ ||2|| ಉಗು ಉಗು ಉಗು ಉಗರಿಂದ ಕ್ರೂರನ್ನ ಹೇರೊಡಲ | ಬಗ ಬಗ ಬಗ ಬಗದು ರಕುತವನ್ನು | ಉಗಿ ಉಗೀ ಉಗೀ ಉಗಿದು ಚಲ್ಲಿ ಕೊರಳಿಗೆ ಕರುಳ | ತೆಗೆ ತೆಗೆ ತೆಗೆ ತೆಗೆದು ಇಟ್ಟ ನರಸಿಂಹಾ ||3|| ಯುಗ ಯುಗ ಯುಗ ಯುಗ…

Transliteration

Balire balire narasimha mahasimha Malamala malatavara vairi uri mari | pa || Naga naga nagagalallade chaturda Jagajaga jagavella kampisi kempage Hage hage hage balava desegedesi roshakidi Ugu ugu ugulutta banda narasimha || 1 || Bigi bigi bigidu hubbu gantane haki Hoge hoge hogesutti sarvaranje Nege nege nege negedu kuppalisi asuranna Magu magu magu bedikonda narasimha || 2 || Ugu ugu ugurinda kru…