Haridasa Sahitya — Vyasadasa

Bakuta jana munde ninavara hinde

ಭಕುತ ಜನ ಮುಂದೆ ನೀನವರ ಹಿಂದೆ

Composer: Vijaya Dasaru · Deity: Hari · Genre: Bhakti

Kannada lyrics

ಭಕುತ ಜನ ಮುಂದೆ ನೀನವರ ಹಿಂದೆ ||pa|| ಯುಕುತಿ ಕೈಗೊಳ್ಳದೊ ಗಯ ಗದಾಧರನೆ ||a.pa|| ಕಟ್ಟೆರಡು ಬಿಗಿದು ನದಿ ಸೂಸಿ ಪರಿಯುತ್ತಿರೆ | ಕಟ್ಟಲೆಯಲಿ ಹರಿಗೋಲು ಹಾಕಿ || ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ | ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ? ||1|| ಕಾಳೆ ಹೆಗ್ಗಾಳೆ ದುಂದುಛಿ ಭೇರಿ ತಮಟೆ ನಿ- | ಸ್ಸಾಳ ನಾನಾವಾದ್ಯ ಘೋಷಣಗಳು || ಸಾಲಾಗಿ ಬಳಿವಿಡಿದು ಸಂಭ್ರÀಮದಿ ಬರುವಾಗ | ಆಳು ಮುಂದಲ್ಲದೆ ಅರಸು ತಾ ಮುಂದೆ?||2|| ಉತ್ಸಾಹ ವಾಹನದಿ ಬೀದಿಯೊಳು ಮೆರೆಯುತಿರೆ | ಸತ್ಸಂಗತಿಗೆ ಹರಿದಾಸರೆಲ್ಲ || ವತ್ಸಲ ಸಿರಿ ವಿಜಯವಿಠ್ಠಲ ವೆಂಕಟಾಧೀಶ ವತ್ಸ ಮುಂದಲ್ಲದೆ ಧೇನು ತಾ ಮುಂದೆ ? ||3||

Transliteration

Bakuta jana munde ninavara hinde ||pa|| Yukuti kaigollado gaya gadadharane ||a.pa|| Katteradu bigidu nadi susi pariyuttire | Kattaleyali harigolu haki || Nettane acegicege pogi baruvaga | Huttu mundallade harigolu munde ? ||1|| Kale heggale dunduci beri tamate ni- | Ssala nanavadya goshanagalu || Salagi balivididu sambraàmadi baruvaga | Alu mundallade arasu ta munde?||2|| Utsaha vahanadi bidiyolu…