Haridasa Sahitya — Vyasadasa
Bakthyathmaka sulaadhi
ಮಟ್ಟ ತಾಳ
Composer: Vijaya Dasaru · Deity: Hari · Genre: Sulaadi
Kannada lyrics
ಮಟ್ಟ ತಾಳ ಒಂದು ಕರ್ಮವನ್ನು ತಂದು ನಮಗೆ ಹಚ್ಚಿ ಇಂದಿರೆ ರಮಣನೆ ಅಂದು ಸೃಜಿಸಿ ಜಗವ ಒಂದೊಂದು ಪರಿಯಲ್ಲಿ ಮುಂದುಗೆಡಿಸಿ ಭವದ ಸಿಂಧುವಿನೊಳಗಿಟ್ಟು ಪೊಂದಿಸಿದೆ ಹೀಗೆ ನೊಂದು ನೋವಾದರು ಅಂದೇ ಬಲ್ಲದಲೆ ಅಂದರೆ ನಿನಗರಿಂದೇನಾಗುವದೊ ತಂದೆ ತಂದೆಯ ತಂದೆ ವಿಜಯ ವಿಠ್ಠಲ ದೀನ ಬಂಧುವೆ ನಿನಗೊಮ್ಮೆ ಅಂದಾರೆ ಬಿಡುವ || ರೂಪಕ ತಾಳ ಏನಾಗುವದು ನಿನಗೆ ನಾನಂದ ನುಡಿಗಳು ಹಾನಿ ವೃದ್ಧಿಗಳಿಲ್ಲದ ಶ್ರೀ ನಾರಾಯಣ ಮೂರ್ತಿ ಕೇಣಿಗೊಂಡಾನೀಚ ಮಾನವ ನಾನಯ್ಯ ಏನರ ಮನವೆನ್ನಾಧೀನವಲ್ಲವೆ ಕೇಳು ಭಾನುಕುಲೋದ್ಭವ ವಿಜಯ ವಿಠಲ ನಿನಗೆ ಏನೇನು ಅಂದರೆ, ಊನ ಆಗುವದೇನೊ || ಝಂಪೆ ತಾಳ ಕಡಿಮೆ ಆಯುಷವೆಂದು ನುಡಿವೆನೆಂದಾದರೆ ಕಡೆಯಾವದು ನಿನ್ನ ದಿವಸಗಳಿಗೆ ಕ…
Transliteration
Rupaka tala Enaguvadu ninage nananda nudigalu Hani vruddhigalillada sri narayana murti Kenigondanica manava nanayya Enara manavennadhinavallave kelu Banukulodbava vijaya vithala ninage Enenu andare, Una aguvadeno ||3|| Jampe tala Kadime ayushavendu nudivenendadare Kadeyavadu ninna divasagalige Kudiyali niru dorakali byadavembene Padade ninnungutadali gangeya Odala kshudhiyannu veggalisidembene Bid…