Haridasa Sahitya — Vyasadasa
Baiyiro baiyiro
ಬೈಯಿರೋ ಬೈಯಿರೋ
Composer: Purandara Dasaru · Deity: Hari · Genre: Philosophy
Kannada lyrics
ಬೈಯಿರೋ ಬೈಯಿರೋ ಮನಮುಟ್ಟಿ ಬೈಯಿರೋ ।।ಪ।। ಚೆನ್ನಾಗಿ ಬೈದೆನ್ನ ಧನ್ಯನ ಮಾಡಿರೊ ।।ಅ.ಪ।। ಅವರು ಇವರು ಬೈವರೆಂಬೊ ಹೀನಬುದ್ಧಿ ನನಗಿಲ್ಲ ನಾ ಮಾಡಿದಷ್ಟು ಪಾಪವನ್ನು ಅಳೆದುಹಾಕಿ ಹಂಚಿಕೊಳ್ಳಿರೋ ।।೧।। ಇರುವೆ ನೊಣ ಕೊಂದ ಪಾಪ ಪರನಿಂದೆ ಮಾಡಿದ ಪಾಪ ಹೊಲೆಯ ಪಾಪ ಕೆಲವು ಉಂಟು ಅಳೆದು ಹಾಕಿ ಹಂಚಿಕೊಳ್ಳಿರೋ ।।೨।। ಅತ್ತೆ ಮಾವನ ಬೈದ ಪಾಪ ಮತ್ತೆ ಹಿರಿಯರ ಜಾರಿದ ಪಾಪ ಕರ್ತ ಶ್ರೀ ಪುರಂದರವಿಠಲನ್ನ ಚಿತ್ತದಲ್ಲಿ ನೆನೆಯದ ಪಾಪ ।।೩।।
Transliteration
Baiyiro baiyiro Manamutti baiyiro ||pa|| Chennagi baidenna dhanyana madiro ||a.pa|| Avaru ivaru baivarembo Hinabuddhi nanagilla Na madidashtu papavannu Aleduhaki hamcikolliro ||1|| Iruve nona konda papa Paranimde madida papa Holeya papa kelavu umtu Aledu haki hancikolliro ||2|| Atte mavana baida papa Matte hiriyara jarida papa Karta sri purandaravithalanna Cittadalli neneyada papa ||3||