Haridasa Sahitya — Vyasadasa

Bagilanu teredu seveyanu kodo hariye

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ

Composer: Kanakadasaru · Deity: Hari · Genre: Bhakti

Kannada lyrics

ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ || ಪ|| ಕೂಗಿದರು ಧ್ವನಿ ಕೇಳಲಿಲ್ಲವೇ ನರಹರಿಯೆ || ಅ.ಪ || ಪರಮಪದದೊಳಗೆ ವಿಷಧರನ ತಲ್ಪದಲಿ ನೀ ಸಿರಿಸಹಿತ ಕ್ಷೀರವಾರಿಧಿಯೊಳಿರಲು ಕರಿರಾಜ ಕಷ್ಟದಲಿ ಆದಿಮೂಲ ಎಂದು ಕರೆಯಲಾಕ್ಷಣ ಬಂದು ಒದಗಿದೆಯೊ ನರಹರಿಯೇ || ೧ || ಕಡುಕೋಪದಿಂ ಖಳನು ಖಡುಗ ಕೈಯಲಿ ಪಿಡಿದು ನಿ ನ್ನೊಡೆಯನೆಲ್ಲಿಹನೆಂದು ಕಂಬವನು ಜಡಿಯೆ ದೃಢಭಕುತಿಯಿಂ ಶಿಶುವು ಬಿಡದೆ ನಿನ್ನನು ಭಜಿಸೆ ಸಡಗರದಿ ಸ್ತಂಭದಿಂದೊಡೆದೆ ನರಹರಿಯೆ || ೨ || ಯಮಸುತನ ರಾಣಿಗಕ್ಷಯವಸನವನಿತ್ತೆ ಸಮಯದಲಿ ಅಜಮಿಳನ ಪೊರೆದೆ ಸಮಾಯಾಸಮಯವುಂಟೆ ಭಕ್ತವತ್ಸಲ ನಿನಗೆ ಕಮಾಲಾಕ್ಷ ಕಾಗಿನೆಲೆಯಾದಿ ಕೇಶವನೆ || ೩ ||

Transliteration

Bagilanu teredu seveyanu kodo hariye Kugidaru dhvani kelalillave narahariye ||pa|| Paramapadadolage vishadharana talpadali ni Sirisahita kshiravarudhiyoliralu Kariraja kashtadali adimula endu Kareyalakshana bandu odagideyo narahariye ||1|| Kadukopadim kalanu kadugavanu hididu ni Nnodeyanellihanu endu nudiye Drudhabakiyali sisuvu bidade ninnanu Bajise Sadagaradi kambadindodede narahariye ||2|| Yama…