Haridasa Sahitya — Vyasadasa
Badukidenu badukidenu
ಬದುಕಿದೆನು ಬದುಕಿದೆನು
Composer: Purandara Dasaru · Deity: Hari · Genre: Philosophy
Kannada lyrics
ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು ಪದುಮನಾಭನ ಪಾದದೊಲುಮೆ ಎನಗಾಯಿತು ||ಪ|| ಮುಕ್ತರಾದರು ಎನ್ನ ನೂರೊಂದು ಕುಲದವರು ಮುಕ್ತಿ ಮಾರ್ಗಕೆ ಯೋಗ್ಯ ನಾನಾದೆನು ಮುಕ್ತಿದಾಯಕನ ಭಕ್ತಿಗೆ ಮನವು ನೆಲೆಸಿತು ವ್ಯಕ್ತವಾಯಿತು ನಾಲಿಗೆಯೊಳು ಹರಿನಾಮ ||೧|| ಹರಿಯ ತೀರ್ಥ ಪ್ರಸಾದವಿಂದೆನಗೆ ದೊರಕಿತು ಹರಿಕಥಾಮೃತವೆನ್ನ ಕಿವಿಗೊದಗಿತೋ ಹರಿದಾಸರು ಎನ್ನ ಬಂಧು ಬಳಗಾದರು ಹರಿಮುದ್ರೆ ಎನಗಾಭರಣವಾಯಿತು ||೨|| ಹಿಂದೆನ್ನ ಸಂತತಿಗೆ ಸಕಲ ಸಾಧನವಾಯಿತು ಮುಂದೆನ್ನ ಜನ್ಮವು ಸಫಲವಾಯಿತು ತಂದೆ ಪುರಂದರ ವಿಠಲನೆಂದೆಂಬ ಪರದೈವ ಬಂದು ಹೃದಯದಲಿ ನೆಲೆಯಾಗಿ ನಿಂತ ||೩||
Transliteration
Badukidenu badukidenu Bavavenage hingitu Padumanabana padadolume enagayitu ||pa|| Muktaradaru enna nurondu kuladavaru Mukti margake yogya nanadenu Muktidayakana Baktige manavu nelesitu Vyaktavayitu naligeyolu harinama ||1|| Hariya tirtha prasadavindenage dorakitu Harikathamrutavenna kivigodagito Haridasaru enna bamdhu balagadaru Harimudre enagabaranavayitu ||2|| Hindenna samtatige sakala sadhanava…