Haridasa Sahitya — Vyasadasa
Baare gauri pujisuvenu
ಬಾರೆ ಗೌರಿ ಪೂಜಿಸುವೆನು
Composer: Haridasa · Deity: Gouri / Parvati Devi · Genre: Bhakti
Kannada lyrics
ಬಾರೆ ಗೌರಿ ಪೂಜಿಸುವೆನು ಸಾರಸಾಂಬಕಿ ಸಾರುವೆ ಸಂಸಾರದಿ ಸುಖದೋರೆ ವಿಧುಮುಖಿ ||pa|| ಕುಂದ ಮಲ್ಲಿಗೆ ಜಾಜಿ ಕುಸುಮ ಗಂಧ ಪರಿಮಳ ಚಂದದಿ ಸಮರ್ಪಿಸುವೆನು ಪುಷ್ಪಫಲಗಳ|| ಮಂಗಳೆಂದು ಪಾಡುತ ಬೆಳಗುವೆನು ಆರುತಿ ಮಂಗಳಗೌರಿಯೆ ಕೊಡು ಸೌಭಾಗ್ಯ ಸಂತತಿ|| ಮಂಗಳ ಪ್ರದಾತೆ ಗಿರಿಸಂಭೂತೆ ಸುರನುತೆ ಮಂಗಳಾಂಗಿ ಕುರು ಕರುಣಾಮಯಿ ನಮೋಸ್ತುತೆ || ಪತ್ಯಂತರ್ಗತ ಹರಿಯಸೇವೆ ನಿತ್ಯ ಮಾಡಿಸೆ ಪುತ್ರ ಪೌತ್ರಾದಿ ಸಂಪದವಿತ್ತು ರಕ್ಷಿಸೆ || ರತಿಯ ಪತಿಯ ಪಿತಗೆ ಸದಾಪ್ರತಿಮೆಯೆನಿಸುವ ಅತಿಥಿಗಳನು ಸೇವಿಸುವ ಸುಮತಿಯ ಕೊಡು ಜವ|| ಸಡಗರದಿ ನಿಮ್ಮಡಿಯ ಶೇವೆ ಬಿಡುದೆ ಮಾಡುವೆ ಮೃಡನ ರಾಣಿ ಕೊಡುವರಗಳ ಗಡನೆ ಬೇಡುವೆ || ಶರಣು ಜನರ ಪೊರೆವ ಕಾರ್ಪರ ನಾರಸ…
Transliteration
Bare gauri pujisuvenu sarasambaki | Saruve samsaradi sukadore vidhumuki || pa || Kunda mallige jaji kusuma gamdha parimala | Chandadi samarpisuvenu Pala pushpagala || 1 || Mangaleyendu paduta belaguvenu Arati | Mangalagauriye kodu saubagya santati || 2 || Mangalapradate girisambute suranute | Mangalangi kuru karunamayi namostute || 3 || Patyantargata hariya seve nitya madise | Putra pautradi sampa…