Haridasa Sahitya — Vyasadasa

Baaramma ele muddu

ಬಾರಮ್ಮ, ಎಲೆ ಮುದ್ದು

Composer: Purandara Dasaru · Deity: Krishna / Govinda / Mukunda · Genre: Bhakti

Kannada lyrics

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ||ಪ|| ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ ಬಾಲಕರನು ಬಡೆವನಮ್ಮ ಮುದ್ದು, ನೀಲವರ್ಣಗೆ ಬುದ್ಧಿ ಹೇಳಮ್ಮ ||ಅ|| ಸಣ್ಣವನಾಗಿ ತೋರುವನಮ್ಮ, ಪಾಲ್- ಬೆಣ್ಣೆ ಮೊಸರು ಕದಿವನಮ್ಮ ಕಣ್ಣಾರೆ ಕಂಡವು ಮಗ ನಿಮ್ಮ , ಮುದ್ದು ಚಿಣ್ಣಗೆ ಬುದ್ಧಿಯ ಪೇಳಮ್ಮ || ಇಟ್ಟ ಕಸ್ತೂರಿ ನಾಮದವನಮ್ಮ, ಅವ ಹೊಟ್ಟೆಯೊಳಿಡಬಲ್ಲನೀ ಜಗವಮ್ಮ ದುಷ್ಟ ಹಾವನು ತುಳಿದವನಮ್ಮ, ಗೋಪಿ ಗಟ್ಟ್ಯಾಗಿ ಬುದ್ಧಿಯ ಪೇಳಮ್ಮ || ಅರಳೆಲೆ ಮಾಗಾಯಿಯವನಮ್ಮ, ಹೊನ್ನ ಬೆರಳ ರನ್ನದ ಮುದ್ರಿಕೆಯವನಮ್ಮ ಇರುಳುಹಗಲು ನಮ್ಮ ಮರುಳು ಮಾಡಿ ಪೋದ ತರಳಗೆ ಬುದ್ಧಿಯ ಪೇಳಮ್ಮ || ಮಾಯಾರೂಪಿಲಿ ಬರುವನಮ್ಮ, ಕದ್ದು ಆವಿನ ಮೊಲೆ ಉಂಬುವನಮ್ಮ ಮಾವನ…

Transliteration

Baramma, ele muddu gopyamma ||pa|| Nimma , balakrushnayyage buddhi helamma Balakaranu badevanamma Muddu, nilavarnage buddhi helamma ||a|| Sannavanagi toruvanamma, pal- Benne mosaru kadivanamma Kannare kandavu maga nimma , muddu Cinnage buddhiya pelamma ||1|| Itta kasturi namadavanamma, ava Hotteyolidaballani jagavamma Dushta havanu tulidavanamma, gopi Gattyagi buddhiya pelamma ||2|| Aralele magayi…