Haridasa Sahitya — Vyasadasa

Avanavanu kayda

ಆವನಾವನು ಕಾಯ್ದ

Composer: Purandara Dasaru · Deity: Hari · Genre: Bhakti

Kannada lyrics

ಆವನಾವನು ಕಾಯ್ದ ಅವನಿಯೊಳಗೆ ದೇವ ದೇವೇಶ ಶ್ರೀ ಹರಿಯಲ್ಲದೆ ||ಪ|| ಆವ ತಂದೆಯು ಸಲಹಿದನು ಪ್ರಹ್ಲಾದನ ಆವ ತಾಯಿ ಕಾಯ್ದೆಳು ಧ್ರುವರಾಯನ ಆವ ಮಗ ಸಲಹಿದನು ಆ ಉಗ್ರ ಸೇನನ ಜೀವಂಗೆ ಪೋಷಕನು ಶ್ರೀ ಹರಿಯಲ್ಲದೆ ||೧|| ಆವ ಬಾಂಧವರು ಸಲಹಿದರು ಆ ಗಜರಾಜನ ಆವ ಪತಿ ಕಾಯ್ದ ದ್ರೌಪದಿಯ ಮಾನ ಆವ ಸೋದರ ಸಲಹಿದನು ಆ ವಿಭೀಷಣನ ಜೀವರಿಗೆ ದಾತೃ ಶ್ರೀ ಹರಿಯಲ್ಲದೇ ||೨|| ಆವನಾಧಾರ ಅಡವಿಯೊಳಿಪ್ಪ ಮೃಗಗಳಿಗೆ ಆವ ರಕ್ಷಕನು ಪಶು ಜಾತಿಗಳಿಗೆ ಆವ ಪೋಷಕನು ಗರ್ಭದಲ್ಲಿಪ್ಪ ಶಿಶುವಿಗೆ ದೇವ ಸಿರಿ ಪುರಂದರವಿಠಲನಲ್ಲದಲೆ ||೩||

Transliteration

Avanavanu kayda avaniyolage Deva devesa sri hariyallade ||pa|| Ava tandeyu salahidanu prahladana Ava tayi kaydelu dhruvarayana Ava maga salahidanu A ugra senana Jivange poshakanu sri hariyallade ||1|| Ava bandhavaru salahidaru A gajarajana Ava pati kayda draupadiya mana Ava sodara salahidanu A vibishanana Jivarige datru sri hariyallade ||2|| Avanadhara adaviyolippa mrugagalige Ava rakshakanu pasu…