Haridasa Sahitya — Vyasadasa

Avalanjisidhalavalu

ಆವಳಂಜಿಸಿದಳವಳು

Composer: Prasanna Venkata Dasaru · Deity: Krishna · Genre: Dasara Pada

Kannada lyrics

ಆವಳಂಜಿಸಿದಳವಳು ಪೇಳು ರಂಗಮ್ಮಾ ನಾ ನವಳ ಗಾರುಮಾಡುವೆ ನಡೆ ಕೃಷ್ಣಮ್ಮಾ ||ಪ|| ದೂರುವಿರ‍್ಯಾದರೆ ಮಗನ ಹಾದಿಗೆ ಹೋಗದಿರಿ ಎಂದು ಸಾರಿಕೈಯ ಕಡ್ಡಿಕೊಟ್ಟೆ ಜಾರೆಯರಿಗೆ ಸಾರಿಸಾರಿಗೆನ್ನ ಮನ ರಟ್ಟು ಮಾಡುವ ಮಾತೇನು ಆರಿಗೆ ಮಕ್ಕಳಿಲ್ಲೆ ನಾನೇ ಹಡದವಳೇನೋ ||೧|| ಇದ್ದರಿರಲೀ ಕೂಸಿನ ಆಡುವಾಟಕೊಪ್ಪಿದರೆ ಎದ್ದು ಹೋಗೆಮ್ದರೆ ಹೋಗಲಿಲ್ಲ ಪಳ್ಳಿಂದಾ ಕದ್ದು ತಿಂದನೆಂಬ ಸುಳ್ಳು ಸುದ್ದಿಗೆ ಕಾರಣವೇನೋ ಮುದ್ದೆಬೆಣ್ಣೆ ಕೈಯಲಿತ್ತಾರೊಲ್ಲದೆ ಚಲ್ಲುವ ಕಂದಗ ||೨|| ಏನು ಪುಣ್ಯರಾಶಿ ಕೂಡಿತೆಂದು ನಿನ್ನಾಟವ ನೋಡಿ ಬೀಸಿ ಬಿಗಿದಪ್ಪುವಂಥ ಭಾಗ್ಯವನುಂಡೆ ಕೂಸೆ ನಿನ್ನ ಕಂಡಸೂಯಾ ಬಡುವಾರ ಅಳಿಯಲಮ್ಮಾ ದಾಸರಿಂಗೆ ಲೇಸಾಗಲಿ ಪ್ರಸನ್ನವೆಂಕಟ ಕೃಷ್ಣ…

Transliteration

Avalanjisidalavalu pelu rangamma nanavala Garumaduve nade krushnamma ||pa|| Duruvir^yadare magana hadige hogadiri endu Sarikaiya kaddikotte jareyarige Sarisarigenna mana rattu maduva matenu Arige makkalille nane hadadavaleno ||1|| Iddarirali kusina aduvatakoppidare Eddu hogemdare hogalilla pallinda Kaddu timdanemba sullu suddige karanaveno Muddebenne kaiyalittarollade calluva kandaga ||2|| Enu pun…