Haridasa Sahitya — Vyasadasa

Avakarana mogava

ಆವಕಾರಣ ಮೊಗವ

Composer: Jagannatha Dasaru · Deity: Bhu Varaha · Genre: Bhakti

Kannada lyrics

ಆವಕಾರಣ ಮೊಗವ ತಿರುಹಿದ್ಯೋ ಪೇಳು ಭೂವರಾಹ ಸ್ವಾಮಿಪುಷ್ಕರಣೀತೀರಗನೆ ।।ಪ।। ರಥಸಮೂಹಗಳೇರಿ ಪ್ರಕಾಶಿಪ ಬಗೆಯೊ ಸತಿಯ ಲಾವಣ್ಯಾತಿಶಯವ ನೋಡುವ ಬಗೆಯೊ ಮಿತಿಯಿಲ್ಲದಸುರರ ಉಪೇಕ್ಷೆ ಮಾಡುವ ಬಗೆಯೊ ಪತಿತಪಾವನ ಪೂರ್ಣಕಾಮ ನಿನಗೆ ನುತಿಸಿ ಬಿನ್ನೈಸುವೆನು ಪೇಳೊ ।।೧।। ಭಜಕರೆನ್ನನು ಬಿಡರೆಂಬ ಮನಸಿನ ಬಗೆಯೊ ಅಜಭವಾದಿಗಳ ಸಂಸ್ತುತಿಗಳಾಲಿಪ ಬಗೆಯೊ ರಜನೀಚರರ ಸದೆದು ನಾಟ್ಯವಾಡುವ ಬಗೆಯೊ ಭುಜಗಭೂಷಣಪೂಜ್ಯಚರಣ ತ್ರಿಜಗದ್ವಿಲಕ್ಷಣ ಸುರೂಪನಿರ್ಲೇಪ ।।೨।। ಅನುಗರೊಶ ನೀನಾದಡೆಮ್ಮನು ಮರೆವರೆಂದು ವನಿತೆಗಾರರಿಯದಂತುಪದೇಶಿಸುವ ಬಗೆಯೊ ಘನಲಕ್ಷಣಮುಖಾಬ್ಜವನು ಚುಂಬಿಸುವ ಬಗೆಯೊ ವನಜಸಂಭವನಾಸ್ಯಜನೆ ಜಗ ಜ್ಜನಕ ಜಗನ್ನಾಥವಿಠಲ ।।೩।।

Transliteration

Avakarana mogava tiruhidyo pelu Buvaraha svamipushkaranitiragane ||pa|| Rathasamuhagaleri prakasipa bageyo Satiya lavanyatisayava noduva bageyo Mitiyilladasurara upekshe maduva bageyo Patitapavana purnakama ninage Nutisi binnaisuvenu pelo ||1|| Bajakarennanu bidaremba manasina bageyo Ajabavadigala samstutigalalipa bageyo Rajanicarara sadedu natyavaduva bageyo Bujagabushanapujyacarana Trijagadvilak…