Haridasa Sahitya — Vyasadasa

Ava siriyali ninu enna marete

ಆವ ಸಿರಿಯಲಿ ನೀನು ಎನ್ನ ಮರೆತೆ

Composer: Kanakadasaru · Deity: Hari · Genre: Bhakti

Kannada lyrics

ಆವ ಸಿರಿಯಲಿ ನೀನು ಎನ್ನ ಮರೆತೆ ? ದೇವ ಜಾನಕಿರಮಣ ಪೇಳು ರಘುಪತಿಯೆ ? ।।ಪ॥ ಸುರರ ಸೆರೆಯನು ಬಿಡಿಸಿ ಬಂದನೆಂಬಾ ಸಿರಿಯೆ ಕರಿ ಮೊರೆಯ ಲಾಲಿಸಿದೆನೆಂಬ ಸಿರಿಯೆ ? ಶರಧಿ ಸೇತುವೆಯ ಕಟ್ಟಿದೆನೆನ್ನುವಾ ಸಿರಿಯೆ ಸ್ಥಿರವಾಗಿ ಹೇಳೆನಗೆ ಹೇಳು ರಘುಪತಿಯೆ ।।೧।। ಕಡಲೊಳಗೆ ಮನೆ ಮಾಡಿ ಮಲಗಿದೆನೆಂಬಾ ಸಿರಿಯೆ ಮೃಡ ನಿನ್ನ ಸಖನಾದನೆಂಬ ಸಿರಿಯೆ ? ಬಿಡದೆ ದ್ರೌಪದಿ ಮಾನ ಕಾಯ್ದನೆಂಬ ಸಿರಿಯೆ ದೃಢವಾಗಿ ಹೇಳೆನಗೆ ದೇವಕೀಸುತನೆ ।।೨।। ಭೂಮಿಯನು ಮೂರಡಿಯ ಮಾಡಿದೆನೆಂಬ ಸಿರಿಯೆ ಕಾಮ ನಿನ್ನ ಸುತನಾದನೆಂಬ ಸಿರಿಯೆ ಆ ಮಹಾಲಕುಮಿ ನಿನ್ನ ಸತಿಯಾದಳೆಂಬ ಸಿರಿಯೆ ಪ್ರೇಮದಲಿ ಹೇಳೆನಗೆ ಸ್ವಾಮಿ ಅಚ್ಯುತನೆ ।।೩।। ಮನುಜರೆಲ್ಲರು ನಿನ್ನ ಸ್ತುತಿಸುವ…

Transliteration

Ava siriyali ninu enna marete ? Deva janakiramana pelu ragupatiye ? ||pa|| Surara sereyanu bidisi bandanemba siriye Kari moreya lalisidenemba siriye ? Saradhi setuveya kattidenennuva siriye Sthiravagi helenage helu ragupatiye ||1|| Kadalolage mane madi malagidenemba siriye Mruda ninna sakanadanemba siriye ? Bidade draupadi mana kaydanemba siriye Drudhavagi helenage devakisutane ||2|| Bumiyanu mura…