Haridasa Sahitya — Vyasadasa

Ava rogavo enage deva dhanvanthri

ಆವ ರೋಗವೊ ಎನಗೆ ದೇವಧನ್ವಂತ್ರಿ

Composer: Gopala Dasaru · Deity: Dhanvantari · Genre: Bhakti

Kannada lyrics

ಆವ ರೋಗವೊ ಎನಗೆ ದೇವಧನ್ವಂತ್ರಿ ||ಪ|| ಸಾವಧಾನದಿ ಕೈಯ ಪಿಡಿದು ನೀ ನೋಡಯ್ಯ ||ಅ.ಪ.|| ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ ಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ||1|| ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವುಗುರುಹಿರಿಯರಂಘ್ರಿಗೆ ಶಿರ ಬಾಗದು ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವುಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ||2|| ಅನಾಥಬಂಧು ಗೋಪಾಲವಿಠಲರೇಯಎನ್ನ ಭಾಗದ ವೈದ್ಯ ನೀನೆಯಾದೆ ಅನಾದಿ ಕಾಲದ ಭವರೋಗ ಕಳೆಯಯ್ಯನಾನೆಂದಿಗು ಮರೆಯೆ ನೀ ಮಾಡಿದುಪಕಾರ ||3||

Transliteration

Ava rogavo enage dheva Dhanvanthri | pallavi | Saavadhaanadhi kaiya pididhu nee nodayya | Anu pallavi| Hari moorthigalu kaanisavu enna kangalige Hariya Keerthane kelisadhenna kivige Hari mantra stotra baaradhu enna naligege Hari prasaadhavu jihhege saviyaagadhayya | 1 | Haripaadha sevegenna hasthagalu chalisavu Guru hiriyaramgrige Shira baagadhu Hariya nirmaalyavaagranisadhu naasikavu Hariyaathreg…