Haridasa Sahitya — Vyasadasa
Ava ritiyindha
ಆವ ರೀತಿಯಿಂದ
Composer: Vadirajaru · Deity: Vishnu · Genre: Dasara Pada
Kannada lyrics
ಆವ ರೀತಿಯಿಂದ ನೀಯೆನ್ನ ಪಾಲಿಸೊಶ್ರೀವಿಭು ಹಯವದನ ||pa|| ಈ ವಿಧ ಭವದೊಳು ಇಷ್ಟು ಬವಣೆಪಟ್ಟೆತಾವರೆದಳನಯನ ಹಯವದನ||a.pa|| ಕಾಮನ ಬಾಧೆಯ ತಡೆಯಲಾರದೆ ಕಂಡಕಾಮಿನಿಯರನೆ ಕೂಡಿ ನೇಮನಿಷ್ಠೆಯಿಂದ ನಿನ್ನನು ಭಜಿಸದೆಪಾಮರನಾದೆನೊ ಹಯವದನ ||1|| ಅಂಗನೆಯರಲ್ಲಿ ಅಧಿಕ ಮೋಹದಿಂದಶೃಂಗಾರಗಳನೆ ಮಾಡಿ ಮಂಗಳಾಂಗನೆ ನಿನ್ನ ಮಹಿಮೆಯ ಪೊಗಳದೆಭಂಗಕ್ಕೆ ಒಳಗಾದೆನೊ ಹಯವದನ ||2|| ಹೀನ ಸಂಗವನೆಲ್ಲ ಹಯಮುಖದೇ-ವನೆ ವರ್ಜಿಸುವಂತೆ ಮಾಡೊ ಜ್ಞಾನಿ ಗಳರಸನೆ ದಯವಿಟ್ಟು ನಿನ್ನನುಧ್ಯಾನಿಸುವಂತೆ ಮಾಡೊ ಹಯವದನ ||3||
Transliteration
Ava ritiyinda niyenna paliso Srivibu hayavadana ||pa|| I vidha bavadolu ishtu bavanepatte Tavaredalanayana hayavadana ||a.pa|| Kamana badheya tadeyalarade kanda Kaminiyarane kudi Nemanishtheyinda ninnanu Bajisade Pamaranadeno hayavadana ||1|| Anganeyaralli adhika mohadinda Srungaragalane madi Mangalangane ninna mahimeya pogalade Bangakke olagadeno hayavadana ||2|| Hinasangavanella hayamukade- Vane…