Haridasa Sahitya — Vyasadasa

Atisobisutide sripatiya

ಅತಿ ಶೋಭಿಸುತಿದೆ

Composer: Jagannatha Dasaru · Deity: Garuda · Genre: Dasara Pada

Kannada lyrics

ಅತಿ ಶೋಭಿಸುತಿದೆ ಶ್ರೀಪತಿಯ ವಾಹನ ||ಪ|| ಚತುರ್ದಶಲೋಕದಲಿ ಅಪ್ರತಿವಾಹನ ||ಅ.ಪ|| ವಿನತೆ ಕಶ್ಯಪಮುನಿಗೆ ತನಯನೆನಿಸಿದ ವಾಹನ ಅನುಜರನು ಕದ್ದೊಯ್ದ ಆಢ್ಯವಾಹನ ವನದಿ ಮಧ್ಯದಿ ನಾವಿಕರ ಭಕ್ಷಿಸಿದ ವಾಹನ ಜನಕನಾಜ್ಞದಿ ಕೂರ್ಮಗಜರ ನುಂಗಿದ ವಾಹನ ||೧|| ಕುಲಿಶ ಪಾಣಿಯ ಕೂಡೆ ಕಲಹ ಮಾಡಿದ ವಾಹನ ಒಳಹೊಕ್ಕು ಪೀಯೂಷ ತಂದ ವಾಹನ ಮಲತಾಯಿ ಮಕ್ಕಳನು ಮರುಳುಗೊಳಿಸಿದ ವಾಹನ ಬಲಿರಾಯ ಒಯ್ದ ಮಕುಟವ ತಂದ ವಾಹನ ||೨|| ಕಾಲನಾಮಕನಾಗೆ ಕಮಲಭವನಲಿ ಜನಿಸಿ ಕಾಲಾತ್ಮ ಹರಿಯ ಸೇವಿಪವಾಹನ ಕಾಳಗದಿ ಕಪಿವರರ ಕಟ್ಟು ಬಿಡಿಸಿದ ವಾಹನ ಸೌಪರ್ಣಿಪತಿಯೆಂಬ ಹೊಂಬಣ್ಣವಾಹನ ||೪|| ಪನ್ನಗಾಶನ ವಾಹನ ಪತಿತಪಾವನ ವಾಹನ ಸನ್ನುತಿಪ ಭಕ್ತರನು ಸಲಹುವ ವಾಹನ ಪನ್ನಗಾದ…

Transliteration

atisobisutide sripatiya vahana | chaturadasalikakkapratima vahana | kalanamaengagi kamalabanadali janisi | kalatma hariya sevipa vahana | kalagadi kapivarara kattu bidisida vahana | valakilyara varava padediha vahana || 1 || vinuta kasyapa rushiya tanaya nenisida vahana | anujara kaddoyda adhya vahana | vanada madhyadi avukari bakshisida vahana | janaengajnadi kurmagaja nungida vahana || 2 || kupa…