Haridasa Sahitya — Vyasadasa
Aru hitavaru endu nambabeda
ಆರು ಹಿತವರು ಎಂದು ನಂಬಬೇಡ
Composer: Kanakadasaru · Deity: Hari · Genre: Vairagya
Kannada lyrics
ಆರು ಹಿತವರು ಎಂದು ನಂಬಬೇಡ ।।ಪ।। ಯಾರಿಗ್ಯಾರಿಲ್ಲ ಆಪತ್ತು ಬಂದೊದಗಿದಡೆ ।।ಅ.ಪ।। ಜನಕ ಹಿತದವನೆಂದು ನಂಬಬಹುದೇ ಹಿಂದೆ ತನಯ ಪ್ರಹ್ಲಾದನಿಗೆ ಪಿತ ಮುನಿದನು ಜನನಿಯೇ ರಕ್ಷಿಪಳೆಂತೆಂಬೆನೆ ಅ ಕುಂತಿ ತನಯ ರಾಧೇಯನಿಗೆ ಎರಡೆಣಿಸಿದ ಮೇಲೆ ।।೧। ಮಗನು ತೆತ್ತಿಗನೆನಲು ಕಂಸ ತನ್ನಯ ಪಿತನ ವಿಗಡ ಬಂಧನದಿಂದ ಬಂಧಿಸಿದನು ಜಗವರಿಯೇ ಸೋದರನು ಮಮತೆಯುಳ್ಳವನೆನಲು ಹಗೆವರಸಿ ವಾಲಿಯನು ಅನುಜ ಕೊಲಿಸಿದ ಮೇಲೆ ।।೨।। ತನಗೆ ದೇಹಾನುಬಂಧುಗಳೇ ಬಂಧುಗಳೆಂದು ಮನದಿ ನಿಶ್ಚಯವಾಗಿ ನಂಬಬೇಡ ಘನಕೃಪಾನಿಧಿ ಕಾಗಿನೆಲೆಯಾದಿ ಕೇಶವ ಅನುದಿನ ನಂಬಿದವಗಿಹಪರದಿ ಸುಖವು ।।೩।।
Transliteration
Aru hitavaru endu nambabeda ||pa|| Yarigyarilla Apattu bandodagidade ||a.pa|| Janaka hitadavanendu nambabahude himde Tanaya prahladanige pita munidanu Jananiye rakshipalemtembene a kunti Tanaya radheyanige eradenisida mele ||1| Maganu tettiganenalu kamsa tannaya pitana Vigada bamdhanadinda bandhisidanu Jagavariye sodaranu mamateyullavanenalu Hagevarasi valiyanu anuja kolisida mele ||2|| Tanage deh…