Haridasa Sahitya — Vyasadasa

Aru ballaru hari harara mahimeyanu

ಆರು ಬಲ್ಲರು ಹರಿ ಹರರ ಮಹಿಮೆಯನು

Composer: Kanakadasaru · Deity: Hari · Genre: Bhakti

Kannada lyrics

ಆರು ಬಲ್ಲರು ಹರಿ ಹರರ ಮಹಿಮೆಯನು ವಾರಿಜೋದ್ಭವ ಸುರೇಂದ್ರಾದಿಗಳಿಗಳವಲ್ಲ ।।ಪ॥ ಪೌರತ್ರಯವ ಗೆಲುವ ಸಮಯದಲಿ ತಪವಮಾಡಿ ನಾರಾಯಣಾಸ್ತ್ರವನು ಪಡೆದನೀತ ಗೌರಿಮನೋಹರನ ಘನತರಾರ್ಚನೆಗೈದು ಚಾರುತರ ಚಕ್ರವನು ಪಡೆದನಾ ಶೌರಿ ।।೧।। ಬಲಿ ಚಕ್ರವರ್ತಿ ಭಕ್ತಿಗೆ ಮೆಚ್ಚಿ ಅವನ ಬಾ ಗಿಲಕಾಯ್ದನಚ್ಯುತನು ಅನುಗಾಲದಿ ಬಲಭುಜನು ಬಾಣಾಸುರನ ಗೃಹದ್ವಾರವನು ಬಳಸಿ ಕಾಯ್ದನು ಹರನು ವರವ ತಾನಿತ್ತು ।।೨।। ಭೋಗಿಶಯನನು ಆಗಿ ಭೋಗಿಭೂಷಣನಾಗಿ ವಾಗೀಶನಾಗಿ ಸೃಷ್ಟಿ ಸ್ಥಿತಿ ಲಯಗಳಿಂಗೆ ಆಗು ಕಾರಣ ಕಾರ್ಯ ಕರ್ಮಾದಿ ರೂಪಕ್ಕೆ ಕಾಗಿನೆಲೆಯಾದಿಕೇಶವನ ಮಹಿಮೆಯನು ।।೩।।

Transliteration

Aru ballaru hari harara mahimeyanu Varijodbava surendradigaligalavalla ||pa|| Pauratrayava geluva samayadali tapavamadi Narayanastravanu padedanita Gaurimanoharana ganatararcanegaidu Carutara cakravanu padedana Sauri ||1|| Bali cakravarti Baktige mecci avana ba Gilakaydanacyutanu anugaladi Balabujanu banasurana gruhadvaravanu Balasi kaydanu haranu varava tanittu ||2|| Bogisayananu Agi bogibushanan…