Haridasa Sahitya — Vyasadasa
Aru badukidarayya hari ninna nambi
ಆರು ಬದುಕಿದರಯ್ಯ ಹರಿ ನಿನ್ನ ನಂಬಿ
Composer: Purandara Dasaru · Deity: Hari · Genre: Bhakti
Kannada lyrics
ಆರು ಬದುಕಿದರಯ್ಯ ಹರಿ ನಿನ್ನ ನಂಬಿ ತೋರು ಈ ಜಗದೊಳಗೆ ಒಬ್ಬರನು ಕಾಣೆ||pa|| ಕರಪತ್ರದಿಂದ ತಾಮ್ರಧ್ವಜನ ತಂದೆಯ ಕೊರಳ ಕೊಯಿಸಿದೆ ನೀನು ಕುಂದಿಲ್ಲದೆ ಮರುಳನಂದದಿ ಪೋಗಿ ಭೃಗುಮುನಿಯ ಕಣ್ಣೊಡೆದೆ ಅರಿತು ತ್ರಿಪುರಾಸುರನ ಹೆಂಡಿರನು ಬೆರೆದೆ||1|| ಕಲಹ ಬಾರದ ಮುನ್ನ ಕರ್ಣನನು ನೀ ಕೊಂದೆ ಸುಲಭದಲಿ ಕೌರವರ ಮನೆಯ ಮುರಿದೆ ನೆಲವ ಬೇಡುತ ಹೋಗಿ ಬಲಿಯ ತನುವನು ತುಳಿದೆ ಮೊಲೆಯನುಣಿಸಲು ಬಂದ ಪೂತನಿಯ ಕೊಂದೆ||2|| ತಿರಿದುಂಬ ದಾಸರ ಕೈಲಿ ಕಪ್ಪವ ಕೊಂಬೆ ಗರುಡವಾಹನ ನಿನ್ನ ಚರಿಯವರಿಯೆ ದೊರೆ ಪುರಂದರವಿಠಲ ನಿನ್ನನ್ನು ನಂಬಿದರೆ ತಿರುಪೆಯೂ ಹುಟ್ಟಲೊಲ್ಲದು ಕೇಳೊ ಹರಿಯೆ||3||
Transliteration
Aru badukidarayya hari ninna nambi Toru I jagadolage obbaranu kane||pa|| Karapatradinda tamradhvajana tandeya Korala koyiside ninu kumdillade Marulanamdadi pogi brugumuniya kannodede Aritu tripurasurana hendiranu berede||1|| Kalaha barada munna karnananu ni konde Sulabadali kauravara maneya muride Nelava beduta hogi baliya tanuvanu tulide Moleyanunisalu banda putaniya konde||2|| Tiridumba dasara k…