Haridasa Sahitya — Vyasadasa

Artariyadd hange irabeku

ಅರ್ತರಿಯದ್ಹಾಂಗೆ ಇರಬೇಕು ಮತ್ರ್ಯದೊಳಗೆ

Composer: Mahipati Dasaru · Deity: Vishnu · Genre: Philosophy

Kannada lyrics

ಅರ್ತರಿಯದ್ಹಾಂಗೆ ಇರಬೇಕು ಮತ್ರ್ಯದೊಳಗೆ ಧ್ರುವ ಬಲ್ಲೆನೆಂಬ ಬಡಿವಾರ ಸಲ್ಲದು ತಾ ಅಹಂಕಾರ ಬಲುಸೂಕ್ಷ್ಮ ಗುರುಪಾರಾವಾರ ತಿಳಿಯಲು ವಿಚಾರ ||1|| ತರ್ಕತೆ ದೋರಲು ಖೂನ ಅತ್ರ್ಯುಳ್ಳವರ ನಿಧಾನ ಸರ್ಕನೆ ತಿಳಿವದು ಖೂನ ತಾರ್ಕಣ್ಯದ ಧನ ||2|| ಹಲವು ಮಾತಾಡಿದಂತೆ ಬಲುವಾ ಭಾವದೋರಿತು ನೆಲೆಯು ಗೊಳಬೇಕು ತಿಳುವಂತೆ ಎಲಿಮರಿಕಾಯಂತೆ ||3|| ಬಲ್ಲತನಕೆ ದೂರ ಸುಲಭ ಸುಜ್ಞಾನ ಸಾರಾ ಅಲ್ಲಹುದೇನು ತಾ ವಿಚಾರ ಬಲು ತುಂಬ್ಯಾದ ಸ್ಥಿರ ||4|| ಅರ್ತು ಅರಿಯದ್ಹಾಂಗಿದ್ದು ಗುರ್ತುಹೇಳದೆ ನೀ ಸದ್ದು ಬೆರ್ತು ಮಹಿಪತಿ ನಿಜಹೊಂದು ಅರ್ಥಿ ನಿನಗೊಂದು ||5||

Transliteration

Artariyadd~hange irabeku martyadolaga ||pa|| Ballenemba badivara salladu ta ahankara Balusukshma guruparavara tiliyalu vicara ||1|| Tarkakedoralu kuna artyullavara nidhana Sarkane tilivadu kuna tarkanya dhana ||2|| Halavu matadidante oluvabavadoritu Neleyugolabeku tiluvante elimarikayamte ||3|| Ballatanake dura sulaba suj~jana sara Allahudenu ta vicara balu tumbyada sthira ||4|| Artu ariyad~hangid…