Haridasa Sahitya — Vyasadasa

Aritu nadeyalu beku narakayavettida mele

ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ

Composer: Kanakadasaru · Deity: Hari · Genre: Advice

Kannada lyrics

ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ ಅರಿಯದಿದ್ದರೆ ನರಕವೇ ಪ್ರಾಪ್ತಿ ।।ಪ।। ದುರ್ಜನರ ಮನೆಯ ಪಾಯಸಾನ್ನಕಿಂತ ಸಜ್ಜನರ ಮನೆಯ ರಬ್ಬಳಿಗೆ ಲೇಸು ಹೆಜ್ಜೆಗೆ ಸಾವಿರಾರು ಹೊನ್ನನಿತ್ತರೂ ಬೇಡ ಬಲು ದುರ್ಜನರ ಸಂಗ ಬಲು ಭಂಗ ಹರಿಯೆ ।।೧।। ಭಕ್ತಿಹೀನರ ಮನೆಯ ಪಟ್ಟ ಸುಪ್ಪತಿಗೆಗಿಂತ ಭಕ್ತರ ಮನೆಯ ಕಡೆಬಾಗಿಲ ಕಾಯುವುದು ಲೇಸು ಮುಕ್ತಿ ಮಾರ್ಗವ ತೋರ್ಪ ಮುರಹರಣ ದಾಸರನು ಸಕ್ತಿಯಿಂ ಸೇವಿಸುವುದು ಬಲು ಸೌಖ್ಯ ಹರಿಯೆ ।।೨।। ಆಶೆಕಾರರ ಮನೆಯ ವಿಳಾಸ ಸುಖಕಿಂತ ಆಶಾರಹಿತರ ಮನೆಯ ನಿರ್ಗತಿಕ ದೈನ್ಯ ಲೇಸು ಭೂಸುರ ಪ್ರಿಯ ಕಾಗಿನೆಲೆಯಾದಿಕೇಶವನ ಮೀಸಲಿನ ಪಾದಭಜನೆ ಕಡುಲೇಸು ಮನವೆ ।।೩।।

Transliteration

Aritu nadeyalu beku narakayavettida mele Ariyadiddare narakave prapti ||pa|| Durjanara maneya payasannakinta Sajjanara maneya rabbalige lesu Hejjege saviraru honnanittaru beda balu Durjanara sanga balu Banga hariye ||1|| Baktihinara maneya patta suppatigeginta Baktara maneya kadebagila kayuvudu lesu Mukti margava torpa muraharana dasaranu Saktiyim sevisuvudu balu saukya hariye ||2|| Asekarara mane…