Haridasa Sahitya — Vyasadasa
Arigaadharu purva
ಆರಿಗಾದರೂ ಪೂರ್ವ
Composer: Kanakadasaru · Deity: Hari · Genre: Philosophy
Kannada lyrics
ಆರಿಗಾದರೂ ಪೂರ್ವ ಕರ್ಮ ಬಿಡದು, ಅಜ ಹರ ಸುರ ಮುನಿಗಳ ಕಾಡುತಿಹುದು ||ಪ|| ವೀರ ಭೈರವನಂತೆ ತಾನು ಬತ್ತಲೆಯಂತೆ ಮಾರಿ ಮಸಣಿಗಳಂತೆ ಕೂಳನ್ನು ತಿಂಬರಂತೆ ಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆ ಮೂರೆರಡು ತಲೆ ಹರಗೆ ಕೈಯೊಳು ಕರ್ಪರವಂತೆ ||೧|| ಶಿಷ್ಟ ಹರಿಶ್ಚಂದ್ರಗೆ ಮಸಣದಡಿಗೆಯು ಅಂತೆ ಸೃಷ್ಟಿಸುವ ಬೊಮ್ಮನಿಗೆ ಶಿರವು ತಾ ಹೋಯಿತಂತೆ ಅಷ್ಟ ದಿಕ್ಪಾಲಕರು ಸೆರೆಯಾಗಿರುವರಂತೆ ಕಟ್ಟುಗ್ರದಿಂದ ಇಂದ್ರನಿಗೆ ಮೈಯೆಲ್ಲ ಕಣ್ಣಂತೆ ||೨|| ಹನ್ನೊಂದಕ್ಷೋಹಿಣಿ ಬಲವುಳ್ಳ ಕೌರವನು ರಣದೊಳಗೆ ತೊಡೆ ಮುರಿದು ಬಿದ್ದು ತಾನಿಹನಂತೆ ವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆ ವನಿತೆ ಆ ಧರ್ಮಜನ ತಾಯಿ ತಿರಿದುಂಬಳಂತೆ ||೩|| ಧರೆಗೆ ಧರ್ಮಜನಂತೆ ಕ…
Transliteration
Arigadaru purva karma aja hara sura munigala kadutihudu ||pa|| Vira Bairavanante tanu battaleyante mari masanigalante kulannu timbarante surya chandramarante rahuvattuliyante mureradu tale harage kaiyolu karparavante ||1|| Sishta harischandrage masanadadigeyu ante srushtisuva bommanige Siravu ta hoyitante ashta dikpalakaru sereyagiruvarante kattugradinda indranige maiyella kannante ||2|| Hannondak…