Haridasa Sahitya — Vyasadasa
Arenu maduvaru avaniyolage
ಆರೇನು ಮಾಡುವರು ಅವನಿಯೊಳಗೆ
Composer: Purandara Dasaru · Deity: Hari · Genre: Philosophy
Kannada lyrics
ಆರೇನು ಮಾಡುವರು ಅವನಿಯೊಳಗೆ||pa|| ಪೂರ್ವಜನ್ಮದ ಕರ್ಮ ಹಣೆಯಲ್ಲಿ ಬರೆದುದಕೆ||a.pa|| ಮಾಡಿದಡುಗೆಯು ಕೆಡಲು ಮನೆಯ ಗಂಡನು ಬಿಡಲು ಕೂಡಿದ್ದ ಸತಿ ತಾನು ಕುಣಿಸ್ಯಾಡಲು ಗೋಡೆಗೆ ಬರೆದ ಹುಲಿ ಘುಡಿಘುಡಿಸಿ ತಿನಬರಲು ಆಡದಾ ಮಾತುಗಳ ಅಖಿಳರೂ ನಿಜವೆನಲು||1|| ಹೊಲ ಬೇಲಿ ಮೆದ್ದರೆ ಮೊಲವೆದ್ದು ಇರಿದರೆ ತಲೆಗೆ ತನ್ ಕೈಪೆಟ್ಟು ತಾಕಿದರೆ ಹೆಳಲು ಹಾವಾದರೆ ಗೆಳೆಯ ರಿಪುವಾದರೆ ಕಲಸಿಟ್ಟ ಅವಲಕ್ಕಿ ಕಲಪರಟಿ ನುಂಗಿದರೆ||2|| ಹೆತ್ತಾಯಿ ಮಕ್ಕಳಿಗೆ ಹಿಡಿದು ವಿಷ ಹಾಕಿದರೆ ಮತ್ತೆ ತಂದೆಯು ಹೊರಗೆ ಮಾರಿದರೆ ತೊತ್ತು ಅರಸಿಗೆ ಪ್ರತಿ ಉತ್ತರವನಾಡಿದರೆ ಕತ್ತಲೆಯು ಬೆನ್ನಟ್ಟಿ ಕರಡ್ಯಾಗಿ ಕಚ್ಚಿದರೆ||3|| ಕಣ್ಣಿನೊಳಗಿನ ಬೊಂಬೆ ಕಚ್ಚಾಡ ಬಂ…
Transliteration
Purvajanmada karma haneyalli baredudake||a.pa|| Madidadugeyu kedalu maneya gandanu bidalu Kudidda sati tanu kunisyadalu Godege bareda huli gudigudisi tinabaralu Adada matugala akilaru nijavenalu||1|| Hola beli meddare molaveddu iridare Talege tan kaipettu takidare Helalu havadare geleya ripuvadare Kalasitta avalakki kalaparati nungidare||2|| Hettayi makkalige hididu visha hakidare Matte tandeyu ho…