Haridasa Sahitya — Vyasadasa
Aravindaalaye taaye
ಅರವಿಂದಾಲಯೇ ತಾಯೇ
Composer: Purandara Dasaru · Deity: Lakshmi Devi · Genre: Bhakti
Kannada lyrics
ಅರವಿಂದಾಲಯೇ ತಾಯೇ ,ಶರಣು ಹೊಕ್ಕೆನು ಕಾಯೇ ಸಿರಿ ರಮಣನ ಪ್ರಿಯೇ , ಜಗನ್ಮಾತೇ ||ಪ|| ಕಮಲ ಸುಗಂಧಿಯೇ, ಕಮಲದಳ ನೇತ್ರೆಯೆ, ಕಮಲ ವಿಮಲ ಶೋಭಿತೇ ಕಮನೀಯ ಹಸ್ತಪಾದ, ಕಮಲ ವಿರಾಜಿತೇ, ಕಮಲೇ ಕಾಯೇ ಎನ್ನನು|| ನಿನ್ನ ಕರುಣಾ ಕಟಾಕ್ಷ ವೀಕ್ಷಣದಿಂದಲಿ ತನುಮನಗಳನಿತ್ತೆ ಧನ್ಯ ವಿರಾಜಿತೇ, ಅಜ ಭವಾದಿಗಳ ಪ್ರಸನ್ನೇ, ಕಾಯೇ ಎನ್ನನು|| ಹರಿ ನಿನ್ನ ಉರದಲ್ಲಿ ಧರಿಸಿದನೆಂಬಂಥ ಗರುವದಿ ಮೆರೆಯದಿರೆ ನಿರತ ನಿನ್ನಯ ಮುದ್ದು ಪುರಂದರ ವಿಠಲನ ಚರಣ ಕಮಲವ ತೋರಿಸೆ ||
Transliteration
Aravindaalaye taaye shaaranu hokkenu taaye | Siriramanana preeye jaganmaate || pa || Kamala sugandhiye | kamala dala netriye | Kamala vimala shobhite ||kamaneeya hasta paada | Kamala viraajite |kamale kaaye ennanoo | Taaye | kamale kaaye ennanoo || 1 || Ninna karuna kataaksha | veekshanadinda | Tanumanagalanitte| dhanya viraajitee | Ajabhavaadigala | prasanne kaaye ennanoo | Taaye | prasanne kaaye…