Haridasa Sahitya — Vyasadasa
Aratiyanettire narerellaru
ಆರತಿಯನೆತ್ತಿರೆ ನಾರೇರೆಲ್ಲರು
Composer: Haridasa · Deity: Gouri / Parvati Devi · Genre: Aarathi
Kannada lyrics
ಆರತಿಯನೆತ್ತಿರೆ ನಾರೇರೆಲ್ಲರು||pa|| ಕಾರುಣ್ಯ ಪಾಂಗಳಿಗೆ ಗೌರಿದೇವಿಗೆ||a.pa|| ದೇವರಾಜ ಸೇವ್ಯಮಾನ ಪಾವನಾಂಘ್ರಿಗೆ ಜೀವಕೋಟಿಗನ್ನವಿತ್ತು ಕಾವ ದೇವಿಗೆ ||1|| ಸರ್ವ ಸೌಭಾಗ್ಯವೀವ ಶರ್ವಜಾಯೆಗೆ ಪರ್ವತೇಶ ತನಯಳಿಗೆ ಗರ್ವರಹಿತೆಗೆ ||2|| ರಕ್ಷೌಘ ಧ್ವಂಸಿನಿಗೆ ದಕ್ಷ ಕನ್ಯೆಗೆ ಲಕ್ಷ್ಮೀಕಾಂತನ ಭಗಿನಿ ಲಕ್ಷಣಾಂಗಿಗೆ ||3||
Transliteration
Aratiyanettire narerellaru||pa|| Karunya pangalige gauridevige||a.pa|| Devaraja sevyamana pavanangrige Jivakotigannavittu kava devige ||1|| Sarva saubagyaviva sarvajayege Parvatesa tanayalige garvarahitege ||2|| Rakshauga dhvamsinige daksha kanyege Lakshmikamtana Bagini lakshanangige ||3||