Haridasa Sahitya — Vyasadasa

Arati belagire naariyaru bega

ಆರತಿ ಬೆಳಗಿರೆ ನಾರಿಯರು ಬೇಗ

Composer: Haridasa · Deity: Lakshmi Devi · Genre: Aarathi

Kannada lyrics

ಆರತಿ ಬೆಳಗಿರೆ ನಾರಿಯರು ಬೇಗ ಆದಿ ಕೊಲ್ಹಾಪುರದ ಮಹಾಲಕ್ಷ್ಮಿಗೆ ಹಾಡುತ ಪಾಡುತ ಜಾಣೆಯರೆಲ್ಲರು ಆದಿ ನಾರಾಯಣ ಪ್ರಿಯಳಿಗೆ ||ಪಲ್ಲವಿ|| ವಿಳ್ಳೆ ಕಾಲುಂಗುರ ಋಲ್ಲುರುಳಿ ಪೈಜಣ ಘಲ್ಲುಘಲ್ಲೆಂದು ಹೆಜ್ಜೆಯನಿಡುತ ಉಲ್ಲಾಸದಿಂದಲಿ ನಡುವಿಗೊಡ್ಯಾಣ ಫುಲ್ಲನಾಭನ ಪ್ರಿಯಳಿಗೆ || ಜರದ ಪೀತಾಂಬರ ನಿರಿಗೆಗಳೆಳೆಯುತ ಝಗಝಗಿಸುತ ತಾ ಹೊಳೆಯುತಲಿ ತೊಟ್ಟ ಕಂಚುಕವು ಇಟ್ಟ ವಂಕಿಯ ತೋಡೆ ಬೆಟ್ಟದ ವೆಂಕೋಬನ ಪ್ರಿಯಳಿಗೆ || ಚೌರಿ ರಾಗುಟೆ ಗೊಂಡೆ ಹೆರಳು ಬಂಗಾರ ಬುಗುಡಿ ಬಾವುಲಿ ಹೊಳೆಯುತಲಿ ಸಡಗರದಿಂದಲಿ ತುಡಿಯ ಕುಂಕುಮ ಹಚ್ಚಿ ಒಡೆಯ ವೆಂಕೋಬನ ಮಡದಿಗೆ||

Transliteration

Arati belagire naariyaru bega | Aadi kolhaapurada mahaalakshmige | Haaduta paaduta jaaneyarellaru | Aadinaaraayanana preeyalige || pa || Pille kaalungura lullu paijhana ruli | Ghallu ghillendhejjeyanidutaa | Ulhaasadimdali naduvigodyaana | Phullanaabhana preeyalige || 1 || Jarada peetaambara nirigegalaleyuta | Jhaga jhagisuta taa holeyutali | Totta kamcukavu itta vankiya tode | Bettad vemkobana ma…