Haridasa Sahitya — Vyasadasa

Arathiya hethamma

ಆರತಿಯನು ಎತ್ತಿರಮ್ಮ

Composer: Haridasa · Deity: Lakshmi Devi · Genre: Aarathi

Kannada lyrics

ಆರತಿಯನು ಎತ್ತಿರಮ್ಮ ವರ ಮಹಾಲಕ್ಷುಮಿಗೆ ಚಾರುಮತಿಗೆ ವರವನಿತ್ತಪಾರ ಕರುಣಾಂಬುಧಿಗೆ ||ಪ|| ಶ್ರಾವಣ ಶುಕ್ರವಾರದಲಿ ಸಾವಧಾನ ಮನದಿ ನಿತ್ಯ ಸೇವಿಸುವರಿಗೊಲಿದು ಭಾಗ್ಯವೀವ ಮಹಾಲಕ್ಷುಮಿಗೆ ||೧|| ಹೆತ್ತ ತಾಯಿ ತನ್ನ ಶಿಶುವನರ್ಥಿಯಿಂದ ಸಲಹುವಂತೆ ಭೃತ್ಯವರ್ಗವನ್ನು ಪೊರೆದು ನಿತ್ಯಲೋಕ ಮಾತೆಗೀಗ ||೨|| ಚಿಂತಿತಾರ್ಥವನೀವ ಲಕ್ಷ್ಮೀಕಾಂತನುರಸ್ಥಳದಿ ನಿಂತು ದಂತಿವರದನನಂತ ಗುಣಗಳನಂತಗಾಣದಿರುವಳಿಗೆ ||೩||

Transliteration

Aratiyanu ettiramma vara mahalakshumige Charumatige varavanittapara karunambudhige ||pa|| Sravana sukravaradali savadhana manadi nitya Sevisuvarigolidu bagyaviva mahalakshumige ||1|| Hettatayi tanna sisuvanarthiyinda salahuvante Brutyavargavannu poredu nityaloka mategiga ||2|| Chintitarthaniva lakshmikantanura sthaladi nintu Dantivaradanananta gunagalanantaganadiruvalige ||3||