Haridasa Sahitya — Vyasadasa

Arathi belega bannire

ಆರತಿಯ ಬೆಳಗಬನ್ನಿರೆ ಆರತಿಯ

Composer: Harapanahalli Bheemavvanavaru · Deity: Gouri / Parvati Devi · Genre: Aarathi

Kannada lyrics

ಆರತಿಯ ಬೆಳಗಬನ್ನಿರೆ ಆರತಿಯ ಬೆಳಗಬನ್ನಿರೆ ಪಾರ್ವತಿದೇವಿಯರಿಗೆ ಕೀರುತಿ ಕೊಂಡಾಡುತಲಿ ಪರ್ವತರಾಜನ ಮಗಳಿಗೆ ಆರತಿಯ ಬೆಳಗಬನ್ನಿರೆ ||ಪ|| ವಾಲೆ ಕಠಾಣಿ ಚಿಂತಾಕು ಮ್ಯಾಲೆ ಸರಿಗೆ ಸರ ಮುತ್ತುಗಳು ಕಾಲಗೆಜ್ಜೆಸರಪಳಿನಿಟ್ಟ ಫಾಲಾಕ್ಷನ ಮಡದಿಗೆ ||1|| ರಂಗುಮಾಣಿಕ್ಯದ ಹೆರಳು ಬಂಗಾರದಾಭರಣವಿಟ್ಟು ದುಂಡುಮಲ್ಲಿಗೆ ಮುಡಿದು ಕುಳಿತ ಮಂಗಳಾದೇವಿಯರಿಗೆ ||2|| ದುಂಡುಮುತ್ತಿನ ಮುಕುರ್ಯವು ಚಂದ್ರ ಬಾಳ್ಯಬುಗುಡಿನಿಟ್ಟು ದುಂಡು ಹರಡಿ ಕಂಕಣಕಮಲ ದ್ವಾರ್ಯನಿಟ್ಟ ವಾರಿಜಾಕ್ಷಿಗೆ ||3|| ಜಾತಿಮಾಣಿಕ್ಯದ ವಂಕಿ ನೂತನಾದ ನಾಗಮುರಿಗೆ ಪ್ರೀತಿಯಲಿ ಪೀತಾಂಬ್ರನುಟ್ಟು ಜ್ಯೋತಿಯಂತೆ ಹೊಳೆವೊ ಗೌರಿಗೆ ||4|| ನೀಲವರ್ಣ ಭೀಮೇಶಕೃಷ್ಣ ಧ್ಯಾನಮಾಡುತ…

Transliteration

Arathiya belagabannire parvati deviyarige Kiruti kondadutali parvatarajana magalige Aratiya belagabannire ||pa|| Vale kathani cintaku myale sarige sara muttugalu Kalagejjesarapalinitta palakshana madadige ||1|| Rangumanikyada heralu bangaradabaranavittu Dundumallige mudidu kulita mangaladeviyarige||2|| Dundumuttina mukuryavu camdra balyabugudinittu Dundu haradi kankanakamala dvaryanitta varijakshi…