Haridasa Sahitya — Vyasadasa

Apta matidu nija

ಆಪ್ತ ಮಾತಿದು ನಿಜ

Composer: Gopala Dasaru · Deity: Hari · Genre: Philosophy

Kannada lyrics

ಆಪ್ತ ಮಾತಿದು ನಿಜ ಪ್ರಾಪ್ತ ಜನಕೆ ಕುಪಿತರಾದರೆ ಕೇಳೆ ಅಪ್ರಾಪ್ತರು ।।ಪ॥ ಹರಿಯ ಪೂಜಿಸಿ ನೆಚ್ಚಿ ಪರಿವಾರ ಬಿಟ್ಟರೆ ನಿರಯವೇ ಪ್ರಾಪ್ತಿ ಸಂದೇಹವಿಲ್ಲ ಹಿರಿದು ಹರಿಗೋಲ ನಂಬಿ ಕಿರಿದ್ಹುಟ್ಟುಗಳ ಬಿಡಲು ಭರದಿ ಹೊಳೆದಾಟಿ ತಾ ದಾರಿಯ ಸೇರುವನೆ ।।೧।। ಕೃಷ್ಣನಲ್ಲಿ ದ್ವೇಷ ನಾರಾಯಣನಲ್ಲಿ ಭಕುತಿ ಎಷ್ಟು ಮಾಡಿದರು ಗತಿಪೊಂದುವನೆ ಸಿಟ್ಟಿನಲ್ಲಿ ಸರ್ಪನ ತುಟಿ ತುದಿಯ ಚಿವುಟಿದರೆ ಎಷ್ಟು ಸುಖ ಐದುವನು ನಷ್ಟವಿಲ್ಲದೆ ।।೨।। ಹರಿಯಲ್ಲಿ ದ್ವೇಷ ಹರನಲ್ಲಿ ಭಕುತಿ ಮಾಡಿದರೆ ಪರಮಪದ ದೊರಕುವುದೆ ಮರುಳನಲ್ಲದೆ ಶರಧಿ ಆಶ್ರಯಿಸಿದ್ದ ಮಚ್ಚನ ಬಲಮಾಡಿ ಶರಧಿಯನು ದೂಷಿಸಲು ಹರುಷಬಡುವುದೆ ।।೩।। ಹರನ ದ್ವೇಷವ ಮಾಡಿ ಪೂಜೆಯ ಮಾಡೆ ಪರಮಗತಿಯಾಗುವ…

Transliteration

Apta matidu nija prapta janake Kupitaradare kele apraptaru ||pa|| Hariya pujisi necci parivara bittare Nirayave prapti sandehavilla Hiridu harigola nambi kirid~huttugala bidalu Baradi holedati ta dariya seruvane ||1|| Krushnanalli dvesha narayananalli Bakuti Eshtu madidaru gatiponduvane Sittinalli sarpana tuti tudiya civutidare Eshtu suka aiduvanu nashtavillade ||2|| Hariyalli dvesha haranalli Bak…