Haridasa Sahitya — Vyasadasa

Appattu pariharaka Suladi

ಧ್ರುವತಾಳ

Composer: Vijaya Dasaru · Deity: Hari · Genre: Sulaadi

Kannada lyrics

ಧ್ರುವತಾಳ ಹಗರಣ ಮಾಡದಿರು ಹರಿಯೆ ನಿನಗೆ ಕರವ ಮುಗಿದು ಬೇಡಿಕೊಂಬೆ ಭಕ್ತ ಜನರ ಬಗೆಬಗೆಯಿಂದ ಬಂದ ಕ್ಲೇಶವ ಕಳದು ನಂ ಬಿಗೆಯೆತ್ತು ಪಾಲಿಸುವ ಗುಣವಾರಿಧಿ ಜಗದೊಳು ನಿನಗಿದೆ ವ್ಯಾಪಾರವಲ್ಲದೆ ಮಿಗಿಲೇನೊ ಕಾಣೆ ಸರ್ವದ ನೋಡಲು ಪಗೆವುಳ್ಳವನಾದರು ಬಂದು ನಿನ್ನ ಚರಣ ಯುಗಳ ನಂಬಲು ಕಾಯುವೆನೆಂಬೊ ಬಿರಿದು ಅಗಣಿತವಾಗಿ ದಶದಿಕ್ಕಿಲಿ ಒಪ್ಪುತಿದೆ ನಿಗಮವಿನುತ ನಿಷ್ಕಳಂಕ ಮಹಿಮ ಸೊಗಸೋದೆ ಸರಿ ಸಜ್ಜನರ ಪ್ರತಿಪಾಲಿಪುದು ಮಗುಳೆ ಉತ್ತರವುಂಟೆ ಎಲೊ ದೇವನೆ ಖಗರಾಜಮಣಿಯಿರೆ ಪನ್ನಗ ಗರಳದ ಭಯವೇನು ಹಗಲು ಇರಳು ಒಡನಿದ್ದರಾಗೆ ಭಗವಂತ ಹಲವು ಮಾತಿನ ಫಲವೇನು ಭ ಕ್ತಗೆ ಬಂದಾಪತ್ತು ಪರಿಹರಿಸಿ ನೋಡು ಕರುಣಾದಲ್ಲಿ ನಗೆಗೆಡೆಗಾಗಗೊಡದೆ ರಾಹುವಿನಿಂದಲ…

Transliteration

maTTatALa hariye narahariye karuNAsAgara siriye parara kuruhanariye niruta ninna mariye durita kadaLi kariye suragaNadA dhoriye baride sauKyake kariye duravArtiya bariye duruLaralli bereye paramadindali bariye sarigANenI pariye smaraNeyalli sariye poreva nIne mandara guNaveNisade dhareyoLu mattobbaruLLavarAru turugaLa kAyidA SrI vijaya viThThala kRuShNa eravu mADade I uttaravanu mannisabEku ||2||…