Haridasa Sahitya — Vyasadasa
Apmrutyu nivarana suladi
ಧ್ರುವತಾಳ
Composer: Vijaya Dasaru · Deity: Hari · Genre: Sulaadi
Kannada lyrics
ಧ್ರುವತಾಳ ರುದ್ರಾಂತರ್ಗತ ನಾರಸಿಂಹ ಮೃತ್ಯುನಿವಾರಿ ಭದ್ರ ಫಲದಾಯಕ ದೋಷದೂರ ಚಿದ್ರೂಪ ಚಿತ್ಪ್ರಕೃತಿ ತ್ರಿಲೋಕನಾಥ ಅದ್ರಿ ಧರಿಸಿ ಗೋಕುಲ ಕಾಯ್ದ ವಿನೋದ ನಿದ್ರಾರಹಿತ ನಿಗಮವಂದ್ಯ ಭಕ್ತಾನಂದ ಉದ್ರೇಕಾ ತಂದು ಕೊಡುವ ಕಾಮಿತಾರ್ಥ ಭದ್ರಪ್ರದಾಯಕ ದೋಷದೂರ ಮುದ್ರೆಧರಿಸಿ ನಿನ್ನ ಭಕ್ತಿಯೆಂಬೋ ಗುಣ ಸ- ಮುದ್ರದೊಳಗೆ ಲೋಲಾಡುತಿಪ್ಪ ಶೂದ್ರಗಾದರು ಆಶಾ ಭಯವಿಲ್ಲವೆಂದು ಮಹ ರುದ್ರಾದಿಗಳು ಪೇಳುತಿಪ್ಪರಿದೆ ಕೋ ಕದ್ರುವೆ ಮಗ ವಾಸುಕಿಯಾ ಗರುಡನ್ನ ಉ- ಪದವ್ರ ಬಿಡಿಸಿ ನೀನೆ ಪಾಲಿಸಿದಂದು ಕ್ಷುದ್ರದೇವತೆಗಳಿಗೆ ಈ ಪರಿ ಶಕ್ತಿಯುಂಟೆ ಛಿದ್ರತನ ಎಣಿಸದಿರು ಪರಮ ಕರುಣೀ ರೌದ್ರಾ ಮೂರುತಿ ಶಾಂತ ವಿಜಯ ವಿಠ್ಠಲ ನಿನ್ನ ಸದೃಶ ದೇವನ ಕಾಣೆನೊ ಜಗತ್…
Transliteration
dhruvatALa rudrAntargata nArasiMha mRutyunivAri Badra PaladAyaka dOShadUra cidrUpa citprakRuti trilOkanAtha adri dharisi gOkula kAyda vinOda nidrArahita nigamavandya BaktAnanda udrEkA tandu koDuva kAmitArtha BadrapradAyaka dOShadUra mudredharisi ninna BaktiyeMbO guNa sa- mudradoLage lOlADutippa SUdragAdaru ASA Bayavillavendu maha rudrAdigaLu pELutipparide kO kadruve maga vAsukiyA garuDanna u- pada…