Haridasa Sahitya — Vyasadasa
Aparadhavenisadale kayabeku
ಅಪರಾಧವೆಣಿಸದಲೆ ಕಾಯಬೇಕು
Composer: Jagannatha Dasaru · Deity: Sri Madhwacharyaru · Genre: Dasara Pada
Kannada lyrics
ಅಪರಾಧವೆಣಿಸದಲೆ ಕಾಯಬೇಕು ಕೃಪಣವತ್ಸಲನೆ ಶ್ರೀ ಮಧ್ವಮುನಿ ಗುರುರಾಯ ||pa|| ನೀ ಮಾಡಿದುಪಕಾರ ನಾ ಮರೆವುದೆಂತೋ ಲ ಕ್ಷ್ಮೀ ಮನೋಹರನ ನಿಜದಾಸಾಗ್ರಣೀ ಪಾಮರನ ಲೋಕದೊಳು ಧೀಮಂತನೆನಿಸಿದೆ ಮ ಹಾಮಹಿಮ ನಿನ್ನ ಕರುಣಾಮೃತದ ಮಳೆಗರೆದೂ ||1|| ಅವಿವೇಕಿ ನಾನು ನಿನ್ನವನೆಂದು ತಿಳಿದು ಎ ನ್ನವಗುಣಗಳೆಣಿಸದೆ ನಿತ್ಯದಲ್ಲಿ ಸುವಿವೇಕಿಯನೆ ಮಾಡು ಕವಿವರ್ಯ ತವ ಮನೋ ತ್ಸವಕೆ ಎಣೆಗಾಣೆ ನಾನವನಿಯೊಳಗಾವಲ್ಲಿ ||2|| ಏನರಿಯದ ಮೂಢ ಮಾನವನು ನಾನು ಸುಜ್ಞಾನ ವರ್ಯನು ನೀನೆ ಕಾಯಬೇಕು ಮಾನುತ ಜಗನ್ನಾಥ ವಿಠಲನ ಪದಯುಗಳ ಸ ಧ್ಯಾನ ಮಾಡುವ ಧೀರಪ್ರಾಣ ಪಂಚಕರಾಯ ||3||
Transliteration
Aparadhavenisadale kayabeku Krupanavatsalane sri madhvamuni gururaya ||pa|| Ni madidupakara na marevudemto la Kshmi manoharana nijadasagrani Pamarana lokadolu dhimantaneniside ma Hamahima ninna karunamrutada malegaredu ||1|| Aviveki nanu ninnavanendu tilidu e Nnavagunagalenisade nityadalli Suvivekiyane madu kavivarya tava mano Tsavake enegane nanavaniyolagavalli ||2|| Enariyada mudha manavanu nanu…