Haridasa Sahitya — Vyasadasa

Apamrutyu parihariso

ಅಪಮೃತ್ಯು ಪರಿಹರಿಸೊ

Composer: Jagannatha Dasaru · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ಅಪಮೃತ್ಯು ಪರಿಹರಿಸೊ ಅನಿಲದೇವ ಕೃಪಣ ವತ್ಸಲನೆ ಕಾವರ ಕಾಣೆ ಜಗದೊಳಗೆ ||ಪ|| ನಿನಗಿನ್ನು ಸಮರಾದ ಅನಿಮಿತ್ತ ಬಾಂಧವರು ಎನಗಿಲ್ಲ ಆವಾವ ಜನುಮದಲ್ಲಿ ಅನುದಿನವು ಎಮ್ಮನುದಾಸೀನ(/ಎಮ್ಮನೀನುದಾಸೀನ) ಮಾಡುವುದು ಅನುಚಿತವು ನಿನಗೆ ಸಜ್ಜನ ಶಿಖಾಮಣಿಯೆ ||೧|| ಕರಣಾಭಿಮಾನಿಗಳು ಕಿಂಕರರು ಮೂರ್ಲೋಕ ದೊರೆ ನಿನ್ನೊಳಗಿಪ್ಪ ಪರ್ವಕಾಲ ಪರಿಸರನೆ ಈ ಭಾಗ್ಯ ದೊರೆತನಕೆ ಸರಿಯುಂಟೆ ಗುರುವರನೆ ನೀ ದಯಾಕರನೆಂದು ಬಿನ್ನೈಪೆ ||೨| ಭವರೋಗಮೋಚಕನೆ ಪವಮಾನರಾಯ ನಿ- ನ್ನವರವನು ನಾನು ಮಾಧವಪ್ರಿಯನೆ ಜವನ ಬಾಧೆಯ ಬಿಡಿಸು ಅವನಿಯೊಳು ಸುಜನರಿಗೆ ದಿವಿಜಗಣ ಮಧ್ಯದೊಳು ಪ್ರವರ ನೀನಹುದೋ ||೩|| ಜ್ಞಾನಾಯು ರೂಪಕನು ನೀನಹುದೊ, ವಾಣಿ ಪಂ- ಚಾನನಾದ್ಯಮರರಿಗೆ…

Transliteration

Apamrutyu parihariso aniladeva Krupanavatsalane kavara kane ninnulidu ||pa|| Ninaginnu samarada animitta bandhugalu Enagilla avava janumadalli Anudinadalennudasina maduvudu Ninage anucitocitave sajjanasikamaniye ||1|| Karanabimanigalu kinkararu murlokadarasu Hariyu ninnolagippa sarvakala Parisarane I bagya doretanake sariyunte Guruvarya ni dayakaranemdu prarthisuve ||2|| Bavaroga mocakane pavamana…