Haridasa Sahitya — Vyasadasa
Anyarindali sukhavāyitembuvudakkinta
ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ
Composer: Gopala Dasaru · Deity: Hari · Genre: Ugabhoga
Kannada lyrics
ಅನ್ಯರಿಂದಲಿ ಸುಖವಾಯಿತೆಂಬುವುದಕ್ಕಿಂತ ನಿನ್ನಿಂದಾಯಿತೆಂಬ ಕ್ಲೇಶ ಮೇಲಯ್ಯ ನಿನ್ನರಿಯದೆ ಅನ್ಯರ ಬಲ್ಲೆನೆಂಬುದಕ್ಕಿಂತ ಕಣ್ಣಿಲ್ಲದಿರುವ ಕುರುಡ ಮೇಲಯ್ಯ ಪುಣ್ಯಪಾಪವರಿಯದೆ ಬದುಕುವ ಮನು- ಜನಿಗಿಂತ ನಾಯಿಕುನ್ನಿ ಲೇಸಯ್ಯ ಕುಲ- ಹೀನನಾದರು ಸುಖ ದುಃಖಗಳನು ನಿನ್ನಿಂದಾಯಿತೆಂಬ ಮತಿ ಚೆನ್ನಾಗಿ ತಿಳಿಸಯ್ಯ ಗೋಪಾಲವಿಠಲ
Transliteration
Anyarindali sukhavāyitembuvudakkinta ninnindāyitemba klēśa mēlayya ninnariyade an’yara ballenembudakkinta kaṇṇilladiruva kuruḍa mēlayya puṇyapāpavariyade badukuva manu- janiginta nāyikunni lēsayya kula- hīnanādaru sukha duḥkhagaḷanu ninnindāyitemba mati cennāgi tiḷisayya gōpālaviṭhala